ಸತ್ಯಕ್ಕೆ ಅಪಚಾರವಾಗದಂತೆ ನ್ಯಾಯ ಒಪ್ಪಿಕೊಳ್ಳಿ : ಕೋಟ

ಉಡುಪಿ : ಪ್ರಜಾಪ್ರಭುತ್ವದಲ್ಲಿ ಚರ್ಚೆ, ವಾದ, ಟೀಕೆ, ಟಿಪ್ಪಣಿ, ವಿಮರ್ಶೆ ಸಹಜವಾದರೂ ಸತ್ಯಕ್ಕೆ ಅಪಚಾರವಾಗದಂತೆ ನ್ಯಾಯ ಒಪ್ಪಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಕೋಶ ವತಿಯಿಂದ ಕೇಂದ್ರ ಬಜೆಟ್, ಭಾರತೀಯ ಆರ್ಥಿಕತೆ ಮತ್ತು ಆದಾಯ ತೆರಿಗೆಯಲ್ಲಿ ಇತ್ತೀಚಿನ ಸುಧಾರಣೆಗಳು ವಿಷಯವಾಗಿ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಜನಸಾಮಾನ್ಯರಿಗೆ ದೇಶದ ಬಜೆಟ್ ನನ್ನ ಬಜೆಟ್ ಎನ್ನುವ ಭಾವನೆ ಬಂದರೆ ಸಾರ್ಥಕ್ಯ. ಮುಖಕ್ಕಿಂತ ಹೆಚ್ಚು ಮುಖವಾಡಕ್ಕೆ ಬೆಲೆ ಬರುತ್ತಿದೆ. ಅಪಪ್ರಚಾರಕ್ಕೆ ಬೆಲೆ ಸಿಗದಂತೆ ಜನರಿಗೆ ಸುಳ್ಳು, ಸತ್ಯವನ್ನು ಮನವರಿಕೆ ಮಾಡಬೇಕು. ಮಧ್ಯಮ ವರ್ಗಕ್ಕೆ ವಾರ್ಷಿಕ 12.5 ಲಕ್ಷ ರೂ. ತನಕ ಆದಾಯ ತೆರಿಗೆ ವಿನಾಯಿತಿಯಿಂದ ಉಳಿತಾಯವಾಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮುಖ್ಯ ಅತಿಥಿಯಾಗಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಆರ್ಥಿಕ ಕೋಶ ಸಹ ಸಂಚಾಲಕ ಸುಧೀರ್ ಆರ್. ಭಟ್ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ