ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಕೋಟ : ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮಾ.22ರಂದು ನಡೆಯಿತು. ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾಯ ಶಿಬಿರ ಉದ್ಘಾಟಿಸಿದರು.

ಮುಖ್ಯ ಅಭ್ಯಾಗತರಾಗಿ ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕ ನಾಗಾಂಜಿನೇಯಲು ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಉಡುಪಿ ವಿಭಾಗ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ಸಹಾಯಕ ಸಂದೇಶ್, ಅಂಚೆ ಮೇಲ್ವಿಚಾರಕ ಮಹೇಂದ್ರ ಯು.ಎಸ್., ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಖಜಾಂಚಿ ರವಿ ಹಾಗೂ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರು ಆಧಾರ್ ತಿದ್ದುಪಡಿಯ ಪ್ರಯೋಜನವನ್ನು ಪಡೆದರು. ದೇವೇಂದ್ರ ಶ್ರೀಯನ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

Related posts

ಮಣ್ಣಪಳ್ಳ ಕೆರೆ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ವೈದ್ಯಕೀಯ ಶಿಕ್ಷಣದಲ್ಲಿ ಆಧುನಿಕ VR-ಆಧಾರಿತ ಕೌಶಲ ತರಬೇತಿಗೆ ಮೆಡಿಸಿಮ್ ವಿಆರ್‌ನೊಂದಿಗೆ ಮಾಹೆ ಒಪ್ಪಂದ

ಇಡಿ, ಐಟಿ, ಸಿಬಿಐ ದುರುಪಯೋಗ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ