ಕೆಲಸಕ್ಕೆoದು ಬೆಂಗಳೂರಿಗೆ ತೆರಳಿದ ಯುವತಿ ನಾಪತ್ತೆ : ಪ್ರಕರಣ ದಾಖಲು

ಉಡುಪಿ : ಮಣಿಪಾಲದಲ್ಲಿ ಸೋಲಾರ್ ಎನರ್ಜಿ ಸೊಲ್ಯೂಷನ್ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತೇನೆoದು ತಿಳಿಸಿ ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸತೀಶ ಎಂಬವರ 25 ವರ್ಷದ ಮಗಳು ಬಿ ಕಾಂ ಪದವಿ ಮುಗಿಸಿ ಮಣಿಪಾಲದಲ್ಲಿ ಸೋಲಾರ್ ಎನರ್ಜಿ ಸೊಲ್ಯೂಷನ್ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, 2024 ಜುಲೈ 14 ರಂದು ಆಕೆಯು ಕೆಲಸ ಮಾಡುತ್ತಿದ್ದ ಮಣಿಪಾಲ ಕಂಪೆನಿಯವರು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿ ನಿಟ್ಟೂರಿನ ಬಾಡಿಗೆ ಮನೆಯಿಂದ ಬೆಂಗಳೂರಿಗೆ ಹೋಗಿರುತ್ತಾರೆ.

ಬೆಂಗಳೂರಿಗೆ ಹೋಗಿ 2-3 ದಿನಗಳ ನಂತರ ಪಿರ್ಯಾದಿದಾರರು ಮಗಳಿಗೆ ಪೋನ್ ಕರೆ ಮಾಡಿದಾಗ ಬ್ಯುಸಿ ಇದ್ದೇನೆ ಎಂದು ಆಮೇಲೆ ಪೋನ್ ಮಾಡುದಾಗಿ ತಿಳಿಸಿರುತ್ತಾರೆ. ಮತ್ತೆ 2-3 ದಿನಗಳ ನಂತರದಿಂದ ಈವರೆಗೂ ಆಕೆಯ ಮೊಬೈಲ್ ನಂಬ್ರ 63##172### ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಒಳ ಬರುವ ಕರೆಗಳನ್ನು ನಿಷೇಧಿಸಿದೆ ಎಂಬುದಾಗಿ ಬರುತ್ತಿರುವುದಾಗಿದೆ.

ಈ ಬಗ್ಗೆ ಯುವತಿಯ ತಂದೆ ಸತೀಶ್ ತನ್ನ ಮಗಳು ಈ ಹಿಂದೆ ಕೆಲಸ ಮಾಡುತ್ತಿದ್ದ ಮಣಿಪಾಲ ಕಂಪೆನಿಯಲ್ಲಿ ವಿಚಾರಿಸಲಾಗಿ ಆಕೆ ನಮ್ಮ ಕಂಪೆನಿಯಿಂದ ಕೆಲಸ ಬಿಟ್ಟು ಹೋಗಿರುತ್ತಾಳೆ ಎಂದು ತಿಳಿಸಿದ್ದಾರೆ.

ಯುವತಿಯ ತಂದೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !