ಬಿಜೈನಲ್ಲಿ ನಾಪತ್ತೆಯಾಗಿದ್ದ ಯುವತಿ ಕಾರ್ಕಳದಲ್ಲಿ ಪತ್ತೆ

ಕಾರ್ಕಳ : ವಾರದ ಹಿಂದೆ ಬಿಜೈ‌ನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯೋರ್ವಳು ಕಾರ್ಕಳದ ಯುವಕನ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಬಿಜೈ ನಿವಾಸಿಯಾಗಿರುವ ಕೆಲಿಸ್ತಾ ಫೆರಾವೊ (18) ಕಳೆದ ತಿಂಗಳು ಜುಲೈ 30‌ರಂದು ತನ್ನ ಮನೆಯವರಲ್ಲಿ ಹೇಳದೆ ನಾಪತ್ತೆಯಾಗಿದ್ದಳು. ಈ ಕುರಿತು ಮನೆಮಂದಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಲಿಲ್ಲ. ಬಳಿಕ ಬರ್ಕೆ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿರುವ ಕುರಿತು ಪೋಷಕರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಬರ್ಕೆ ಪೊಲೀಸರು ಯುವತಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿ ಯುವತಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ವೇಳೆ ಆಕೆ ರಿಕ್ಷಾದಲ್ಲಿ ತೆರಳಿರುವುದು ಪತ್ತೆಯಾಗಿತ್ತು. ಅಲ್ಲದೆ ಯುವತಿ ಮೊಬೈಲ್‌ನಲ್ಲಿ ಪಬ್‌ಜಿ ಆನ್‌ಲೈನ್‌ ಆಟವಾಡುವ ಹವ್ಯಾಸ ಹೊಂದಿದ್ದಳು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವೇಳೆ ಕಾರ್ಕಳ ತಾಲೂಕಿನ ಗಜೇಂದ್ರ ಬೈಲ್ ಗ್ರಾಮದ ಹುಡುಗನ ಮನೆಯಲ್ಲಿ ಯುವತಿ ಇರುವ ಮಾಹಿತಿ ಲಭಿಸಿದೆ.

ಬಳಿಕ ಅಲ್ಲಿಗೆ ತೆರಳಿದ ಬರ್ಕೆ ಪೊಲೀಸರ ತಂಡ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಇಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ವಿಚಾರಣೆ ಸಂದರ್ಭದಲ್ಲಿ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡುಬಂದಿದ್ದು ಜೊತೆಗೆ ಯುವತಿ ಪೋಷಕರ ಜೊತೆ ಇರಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ