ಇನ್‌ಸ್ಟಾಗ್ರಾಂ ಲಿಂಕ್ ತೆರೆದು 12.46 ಲಕ್ಷ ರೂ ಕಳೆದುಕೊಂಡ ಯುವತಿ

ಉಡುಪಿ : ಇನ್‌ಸ್ಟಾಗ್ರಾಂ ಖಾತೆಗೆ ಬಂದ ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ ಯುವತಿಯೋರ್ವಳು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.

ಶಿವಳ್ಳಿ ಗ್ರಾಮದ ಸಪ್ನಾ (28) ಅವರ ಇನ್ಸ್ಟಾಗ್ರಾಂ ಖಾತೆಗೆ ವರ್ಕ್ ಫ್ರಮ್ ಹೋಮ್ ಎಂದು ಲಿಂಕ್ ಬಂದಿದ್ದು, ಅದನ್ನವರು ಓಪನ್ ಮಾಡಿದ್ದಾರೆ. ಅದರ ಪ್ಲಾಟ್‌ ಫಾರ್ಮ್‌ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು. ಅದಕ್ಕೆ 50 ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿಸೆಂಬರ್ 9ರಿಂದ ಡಿಸೆಂಬರ್ 28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋನ್ ಪೇ, ಪೇಟಿಎಂ ಹಾಗೂ ಕ್ಯಾಶ್ ಡೆವಾಸಿಟ್ ಮೂಲಕ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದು, ಹಣ ವಾಪಸ್ ಸಿಗದೆ ಮೋಸ ಹೋಗಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ