ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ – ರಕ್ಷಿಸಿದ ರೈಲ್ವೇ ಪೊಲೀಸ್

ಮಂಗಳೂರು : ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸ್ ಒಬ್ಬರು ರಕ್ಷಿಸಿರುವ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೈಲು ಇನ್ನೇನು ಚಲಿಸಿತ್ತು‌. ವೇಗವೂ ಹೆಚ್ಚಿದೆ‌. ಆಗ ಓಡೋಡಿಕೊಂಡು ಬಂದ ಯುವಕನೋರ್ವನು ರೈಲು ಹತ್ತಲು ಯತ್ನಿಸಿದ್ದಾನೆ. ಆಗ ರೈಲಿನ ಬಾಗಿಲಿನ ಸರಳು ಆತನ ಹಿಡಿತಕ್ಕೆ ಸಿಗದೆ ಎಡವಿ ಬಿದ್ದಿದ್ದಾನೆ‌. ಈ ವೇಳೆ ಆತ ರೈಲು ಹಾಗೂ ಪ್ಲ್ಯಾಟ್‌ಫಾರ್ಮ್ ಎಡೆಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದಾನೆ‌. ಆಗ ಅಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಘವನ್ ಇದನ್ನು ಗಮನಿಸಿದ್ದಾರೆ‌.

ತಕ್ಷಣ ಧಾವಿಸಿದ ಅವರು ಯುವಕನನ್ನು ಎಳೆದು ರಕ್ಷಿಸಿದ್ದಾರೆ‌. ಕ್ಷಣ ಮಾತ್ರದಲ್ಲಿ ಈ ಘಟನೆ ನಡೆದುಹೋಗಿದೆ. ಯುವಕ ಭಾರೀ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ. ಈ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!