ಕೇರಳದಲ್ಲಿ ನಿಫಾ ಸೋಂಕಿನಿಂದ ಬಳಲುತ್ತಿರುವ ಕಡಬ ಮೂಲದ ಯುವಕ – 8 ತಿಂಗಳಿನಿಂದ ಕೋಮಾದಲ್ಲಿ

ಮಂಗಳೂರು : ಕೇರಳದಲ್ಲಿ ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕನಿಗೆ ನಿಫಾ ಸೋಂಕು ತಗುಲಿ 8 ತಿಂಗಳಿನಿಂದ ಕೋಮಾದಲ್ಲಿದ್ದಾರೆ.

ದ.ಕ.ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಸಮೀಪದ ತುಂಬ್ಯ ನಿವಾಸಿ ಟಿಟ್ಟೋ ತೋಮಸ್(24) ಕೋಮಾದಲ್ಲಿರುವ ಯುವಕ.

ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಅವರು, ಕೇರಳದ ಕ್ಯಾಲಿಕಟ್‌ನಲ್ಲಿರುವ ಇಕ್ರಾ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಟಿಟ್ಟೋ ತೋಮಸ್ ನಿಫಾ ವೈರಸ್ ಬಾಧಿತನಿಗೆ ಆರೈಕೆ ಮಾಡಿದ್ದರು. ಆದ್ದರಿಂದ ಕ್ವಾರಂಟೈನ್‌ನಲ್ಲಿದ್ದ ಟಿಟ್ಟೋಗೆ ಎರಡು ತಿಂಗಳು ಕಳೆದ ಬಳಿಕ ವಿಪರೀತ ತಲೆನೋವು ಆರಂಭವಾಗಿದೆ. ಡಿಸೆಂಬರ್‌ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್‌ಗೆ ತುತ್ತಾಗಿದ್ದರು.

ಚಿಕಿತ್ಸೆಗೆ ಸ್ಪಂದಿಸದೇ ಮರುದಿನವೇ ಕೋಮಾಗೆ ಜಾರಿದ ಟಿಟ್ಟೋ 8 ತಿಂಗಳಿನಿಂದ ಕೇರಳದ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 40 ಲಕ್ಷ ರೂ.ಗಳಷ್ಟು ಖರ್ಚಾದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ. ಇನ್ನು ಮುಂದೆ ನಿಭಾಯಿಸುವುದು ಕಷ್ಟ ಎಂದು ಹೇಳುತ್ತಿದೆ. ಆದ್ದರಿಂದ ಟಿಟ್ಟೋ ತೋಮಸ್‌‌ರನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರು ಕೇರಳ ಸರಕಾರವನ್ನು ಆಗ್ರಹಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar