ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಮೃತ್ಯು..!

ಕಿನ್ನಿಗೋಳಿ : ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು‌ ಹಳೆಯಂಗಡಿಯ ಲೈಟ್ ಹೌಸ್ ನಿವಾಸಿ ಅವಿನಾಶ್ ಎಂದು ಗುರುತಿಸಲಾಗಿದೆ.

ಕಿನ್ನಿಗೋಳಿಯ ಉಲ್ಲಂಜೆಯಲ್ಲಿ ಮನೆಯೊಂದಕ್ಕೆ ಶೀಟ್ ಅಳವಡಿಸುವಾಗ, ಕಬ್ಬಿಣದ ಪೈಪ್ ಮೇಲಕ್ಕೆತ್ತುವಾಗ ವಿದ್ಯುತ್ ತಂತಿ ಕಬ್ಬಿಣದ ಪೈಪ್‌ಗೆ ತಾಗಿದ್ದು ಕೂಡಲೇ ಅವಿನಾಶ್ ಕುಸಿದು ಬಿದ್ದಿದ್ದು ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿದ್ದಾರೆ.

ಈ ಕುರಿತು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ