ಹಾಡಹಗಲೇ ಬಸ್‌ನಲ್ಲಿ ಮಹಿಳೆಯ ಪರ್ಸ್ ಕಳ್ಳತನ; ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಕಳವು

ಉಡುಪಿ : ಹಾಡಹಗಲೇ ಮಹಿಳೆಯೋರ್ವರು ಉಡುಪಿಯ ಬನ್ನಂಜೆ ಕೆ.ಎಸ್.‌ಆರ್.‌ಟಿ.ಸಿ ಬಸ್‌ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪರ್ಸ್ ಕಳ್ಳತನವಾಗಿದೆ.

ಸೆ. 10‌ರಂದು ಬಂಟ್ವಾಳ ತಾಲೂಕಿನ ಗೀತಾ ಬಾಯಿ ಹಾಗೂ ಅವರ ತಂಗಿ ಮಂಗಳೂರಿಗೆ ಹೋಗಲು ಸಂಜೆ 4:45 ಗಂಟೆಗೆ ಖಾಲಿ ಸೀಟಿನಲ್ಲಿ ಅವರ ತಂಗಿ ಕುಳಿತುಕೊಳ್ಳಲು ವ್ಯಾನಿಟಿ ಬ್ಯಾಗನ್ನು ಇಟ್ಟಿದ್ದು, ಆ ವೇಳೆ ಬಸ್ಸಿನಲ್ಲಿ ಸುಮಾರು 30-32 ಪ್ರಾಯದ ಅಪರಿಚಿತ ಹೆಂಗಸು ಬಸ್ಸಿನ ಸೀಟಿನ ಮೇಲೆ ಇಟ್ಟಿದ್ದ ಅವರ ವ್ಯಾನಿಟಿ ಬ್ಯಾಗ್‌‌ನ ಮೇಲೆ ಬಿದ್ದಂತೆ ನಟನೆ ಮಾಡಿ, ಸೀಟಿನ ಕೆಳಭಾಗದಲ್ಲಿ ಕುಳಿತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದು, ಕಟಪಾಡಿ ದಾಟಿದ ನಂತರ ಅವರ ಆಧಾರ್‌ ಕಾರ್ಡನ್ನು ಬಸ್ಸಿನ ಕಂಡಕ್ಟರ್‌‌ರವರಿಗೆ ತೋರಿಸುವ ಸಮಯ ವ್ಯಾನಿಟಿ ಬ್ಯಾಗನ್ನು ತೆರೆದು ನೋಡಿದ್ದು, ಅದರಲ್ಲಿದ್ದ ಪಿಂಕ್‌ ಬಣ್ಣದ ಪರ್ಸ್‌ ಕಾಣೆಯಾಗಿದ್ದು, ಅದರಲ್ಲಿದ್ದ ನಗದು ರೂ 40,000, ಹರಳನ್ನು ಹೊಂದಿದ ಹಳೆಯ ಚಿನ್ನದ ಬೆಂಡೋಲೆ 1 ಜೊತೆ, ಕಲ್ಲಿನ ಚಿನ್ನದ ಮೂಗುಬೊಟ್ಟು ಹಾಗೂ 10,000/-ರೂಪಾಯಿ ಬೆಲೆ ಬಾಳುವ ಓಮನ್‌ ದೇಶದ ರಿಯಾಲ್‌ ಕರೆನ್ಸಿ ನೋಟುಗಳು ಕಳವಾಗಿರುವುದು ತಿಳಿದುಬಂದಿದೆ.

ಕೂಡಲೇ ಕಂಡಕ್ಟರ್‌ ಬಳಿ ವ್ಯಾನಿಟಿ ಬ್ಯಾಗ್‌ ಮೇಲೆ ಬಿದ್ದಂತೆ ನಟನೆ ಮಾಡಿದ್ದ ಮಹಿಳೆಯ ಬಗ್ಗೆ ವಿಚಾರಿಸಿದಾಗ, ಅವರು ಹಾಗೂ ಇನ್ನೋರ್ವ ಚೂಡಿದಾರ್‌ ಧರಿಸಿದ್ದ ಮಹಿಳೆ ಮತ್ತು ಒಂದು ಮಗು ಉಡುಪಿ ಹಳೆ ತಾಲ್ಲೂಕು ಆಫೀಸಿನ ಬಳಿ ಬಸ್ಸಿನಿಂದ ಇಳಿದುಕೊಂಡು ಹೋಗಿರುವುದು ತಿಳಿದುಬಂದಿದೆ.

ಈ ಕುರಿತು ಮಹಿಳೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ