7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಮುಂಬೈಯಲ್ಲಿ ಸೆರೆ

ಕಾಪು : ಆಸ್ತಿ ಕಲಹ ವಿಚಾರವಾಗಿ ಆಪಾದಿತಳಾಗಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅನುರಾಧಾ ಕರ್ಕೇರ ಎಂಬಾಕೆಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.

ಮೂಳೂರಿನಲ್ಲಿ ಆಸ್ತಿ ವಿಷಯದಲ್ಲಿ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, 2012ರಲ್ಲಿ ಪ್ರಕರಣ ದಾಖಲಾಗಿತ್ತು. ಆಕೆಯ ಸಹೋದರಿ ನೀತಾ ನೀಡಿದ್ದ ದೂರಿನಂತೆ ಅನುರಾಧಾ ವಿರುದ್ಧ ಪ್ರಕರಣ ದಾಖಲಾಗಿತ್ತು.

2017ರ‌ವರೆಗೆ ಕೋರ್ಟ್‌ಗೆ ಹಾಜರಾಗಿ ಬಳಿಕ ತಲೆಮರೆಸಿ ಕೊಂಡಿದ್ದಳು. ಈ ಬಗ್ಗೆ ಉಡುಪಿಯ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಮುಂಬಯಿಗೆ ತೆರಳಿದ್ದ ಕಾಪು ಎಎಸ್‌ಐ ರವೀಶ್‌ ಹೊಳ್ಳ, ಎಚ್‌ಸಿಗಳಾದ ಮೊಹಮ್ಮದ್‌ ರಫೀಕ್‌ ಮತ್ತು ಸುಲೋಚನಾ ಅವರು ಎಸ್‌ಐ ಅಬ್ದುಲ್‌ ಖಾದರ್‌ ಮಾರ್ಗದರ್ಶನದಂತೆ ಆರೋಪಿಯನ್ನು ಸಯಾನ್‌ನಲ್ಲಿ ಬಂಧಿಸಿ, ಊರಿಗೆ ಕರೆ ತಂದಿದ್ದಾರೆ.

ಆಕೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15,000 ರೂ. ದಂಡ ವಿಧಿಸಿ, ಆಗಸ್ಟ್ 21ರಂದು ಮತ್ತೆ ಹಾಜರಾಗುವಂತೆ ಸೂಚಿಸಿ ಜಾಮೀನು ನೀಡಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ