ಕೃಷ್ಣಮಠಕ್ಕೆ ಬಂದಿದ್ದ ಯಾತ್ರಾರ್ಥಿ ಮಹಿಳೆ ಮಲಗಿದಲ್ಲಿಯೇ ಸಾವು

ಉಡುಪಿ : ರಥಬೀದಿಯ ಪರಿಸರದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಈ ಮಹಿಳೆ ಯಾತ್ರರ್ಥಿಗಳು ಉಳಿದುಕೊಳ್ಳುವ ಹಾಲ್ ಒಂದರಲ್ಲಿ ಸಾವನಪ್ಪಿದ್ದಾರೆ. ತಾಯಿ ಎಬ್ಬಿಸಿದಾಗ ಮಹಿಳೆ ಎಚ್ಚರಗೊಂಡಿರಲಿಲ್ಲ. ಪ್ರಯಾಣದ ಆಯಾಸದಿಂದ ನಿದ್ದೆಗೆ ಜಾರಿರಬಹುದೆಂದು ತಾಯಿ ಸುಮ್ಮನಾಗಿದ್ದರು. ಮಹಿಳೆ ತುಂಬ ಹೊತ್ತಾದರೂ ಎದ್ದೇಳದೆ ಇದ್ದಿದ್ದರಿಂದ, ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂತು.‌ ತಕ್ಷಣ ಮಹಿಳೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಹಿಳೆ ಅದಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಮೃತ ಮಹಿಳೆ ಶ್ರೀರಂಗಪಟ್ಟಣದ ನಿವಾಸಿ ವಸಂತಿ (55) ಎಂದು ತಿಳಿದುಬಂದಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ