ಮನೆಗೆ ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿಯುವ ಧೈರ್ಯ ತೋರಿದ ಮಹಿಳೆ – ವೀಡಿಯೋ ವೈರಲ್

ಮಂಗಳೂರು : ನಗರದ ಡೊಂಗರಕೇರಿಯಲ್ಲಿರುವ ಮನೆಯೊಂದಕ್ಕೆ ಬಂದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಪಕ್ಕದಮನೆಯ ಮಹಿಳೆಯೊಬ್ಬರು ಹಿಡಿಯುವ ಧೈರ್ಯ ತೋರಿದ್ದಾರೆ.

ಡೊಂಗರಕೇರಿಯ ಬಾಲಕೃಷ್ಣ ನಾಯಕ್ ಎಂಬವರ ಮನೆಯಲ್ಲಿರುವ ಹಳೆಯ ಹಟ್ಟಿಯಲ್ಲಿ ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ಈ ಹೆಬ್ಬಾವು ಪತ್ತೆಯಾಗಿತ್ತು. 9-10 ಅಡಿ ಉದ್ದದ ಹೆಬ್ಬಾವನ್ನು ಬಾಲಕೃಷ್ಣ ನಾಯಕ್‌ರವರ ಮನೆಯ ಪಕ್ಕದ ನಿವಾಸಿ ಲಕ್ಷ್ಮೀ ಕಾಮತ್ ಅವರು ಬಾಲದಲ್ಲಿ ಹಿಡಿದು ರಸ್ತೆಗೆ ತಂದಿದ್ದಾರೆ. ಆ ಬಳಿಕ ಆದಿತ್ಯ ಎಂಬ ಉರಗ ರಕ್ಷಕ ಬಂದು ಹಾವನ್ನು ಹಿಡಿದು ಪಚ್ಚನಾಡಿ ಬಳಿಯ ಮಂಜಲ್ಪಾದೆಯಲ್ಲಿ ಬಿಟ್ಟಿದ್ದಾರೆ.

ಬಾಲಕೃಷ್ಣ ನಾಯಕ್‌ರವರ ಮನೆಯ ಬಳಿಗೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಹೆಬ್ಬಾವು ಬರುತ್ತಿದ್ದು, ಉರಗ ರಕ್ಷಕರನ್ನು ಕರೆಸಿ ಹಿಡಿಸುತ್ತಿದ್ದರು. ಆದರೆ ಈ ಬಾರಿ ಲಕ್ಷ್ಮೀ ಕಾಮತ್ ಅವರು ಹೆಬ್ಬಾವನ್ನು ಹಿಡಿಯುವ ಸಾಹಸ ತೋರಿದ್ದಾರೆ. ಸದ್ಯ ಲಕ್ಷ್ಮೀ ಕಾಮತ್ ಅವರು ಹೆಬ್ಬಾವಿನ ಬಾಲ ಹಿಡಿದು ನಿಯಂತ್ರಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ