ಗಗನಚುಂಬಿ ಕಟ್ಟಡದ ತುದಿಯಲ್ಲಿ ಟೆಲಿಸ್ಕೋಪ್ ಮೂಲಕ ಸೂಪರ್ ಮೂನ್ ವೀಕ್ಷಣೆ

ಮಣಿಪಾಲ : ಇಲ್ಲಿನ ರಾಯಲ್ ಎಂಬೆಸಿ ಕಟ್ಟಡದ ತುತ್ತ ತುದಿಯಲ್ಲಿ ಟೆಲಿಸ್ಕೋಪ್ ಮೂಲಕ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.

ಟೆಲಿಸ್ಕೋಪ್ ಆವಿಷ್ಕಾರ ಮಾಡಿ ವಿಶ್ವ ದಾಖಲೆ ಮಾಡಿರುವ ಎಂಐಟಿ ಉದ್ಯೋಗಿ ಆರ್ ಮನೋಹರ್ ಅವರ ಟೆಲಿಸ್ಕೋಪ್ ಬಳಸಿ ವೀಕ್ಷಿಸಿದ್ದು ವಿಶೇಷವಾಗಿತ್ತು. ಮಾಜಿ ಸಚಿವ ಮಲ್ಪೆ ಪ್ರಮೋದ್ ಮಧ್ವರಾಜ್ ಹಾಗೂ ಅವರ ಪತ್ನಿ, ಪುತ್ರಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ಮಾಡಿ ಸಾಧನೆ ಮಾಡಿದ ಬಗ್ಗೆ ಆರ್ ಮನೋಹರ್ ಅವರಿಗೆ ಪ್ರಶಂಸಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಣಿಪಾಲದ ಸುತ್ತಮುತ್ತ ಕಾಣುವ ಸುಂದರ ನಿಸರ್ಗದ ಕೆಲವೊಂದು ಸ್ಥಳಗಳನ್ನು ಅತಿ ಎತ್ತರದ ಪ್ರದೇಶದಲ್ಲಿ ನಿಂತು ಅತಿ ಹತ್ತಿರ ಕಾಣುವ ಮನೋಹರ್ ಅವರ ದೂರದರ್ಶಕದಲ್ಲಿ ಸಾರ್ವಜನಿಕರಿಗೆ ತೋರಿಸಲಾಯಿತು. ಸಾರ್ವಜನಿಕರು ಕಣ್ತುಂಬ ನೋಡಿ ಮನೋಹರ್ ಅವರನ್ನು ಪ್ರಶಂಸಿದರು.

ಕಾರ್ಯಕ್ರಮ ಸಂಘಟನೆಕಾರ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು,ದೇವಿ ಪ್ರಸಾದ್ ಎನ್.ಆಚಾರ್ಯ ಪರ್ಕಳ , ಆದರ್ಶ್ ಶೆಟ್ಟಿಗಾರ್ ಮತ್ತಿತರರು ಇದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು