ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ

ಹೆಬ್ರಿ : ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆ ಎಂಬಲ್ಲಿ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ಬಸ್ಸಿನ ಮುಂದುಗಡೆಯ ಗಾಜು ಸಂಪೂರ್ಣ ಒಡೆದು ಹೋಗಿ ಚಾಲಕನಿಗೆ ತರಚಿದ ಗಾಯಗಳಾಗಿವೆ. ವಿದ್ಯುತ್ ಕಂಬ ತುಂಡಾಗಿದೆ.

ಬಸ್ ಮಂದಾರ್ತಿಯಿಂದ ಹೆಬ್ರಿ ಕಡೆಗೆ ಸಾಗುತ್ತಿರುವಾಗ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಮರ ಬಸ್ ಮೇಲೆ ಬಿದ್ದಿದೆ. ಬಸ್ಸಿನ ಮುಂದುಗಡೆಯ ಗಾಜು, ಸೈಡ್ ಮಿರರ್ ಸೇರಿದಂತೆ ಕೆಲವೆಡೆ ಹಾನಿಯಾಗಿದೆ.

ಒಂದು ವೇಳೆ ಮರ ನೇರವಾಗಿ ಬಸ್ಸಿನ ಮೇಲೆ ಬಿದ್ದಿದ್ದರೆ ಪ್ರಾಣ ಹಾನಿಯಾಗುವ ಸಂಭವಿತ್ತು. ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಬಸ್ಸಿಗೆ ಹೊಡೆದು ನೇತಾಡುತ್ತಿತ್ತು. ಬಸ್ಸಿನಲ್ಲಿ ಕೆಲವು ಜನ ಪ್ರಯಾಣಿಕರು ಮಾತ್ರ ಇದ್ದಿದ್ದರಿಂದ ನಡೆಯಬಹುದಾದ ದೊಡ್ಡ ಅನಾಹುತ ಒಂದು ತಪ್ಪಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !