ಮರ ಬಿದ್ದು ಮನೆ ಮಾಡು ದ್ವಂಸ; ಮನೆ ನಿರ್ಮಿಸಿಕೊಡಲು ವಿದ್ಯಾಪೋಷಕ್ ಸಂಕಲ್ಪ

ಬ್ರಹ್ಮಾವರ : ಇದೇ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ ತಾಲೂಕಿನ, ಹೇರಾಡಿ ಗ್ರಾಮದ, ಸಂಕಾಡಿ ನಿವಾಸಿ ರಾಜು ಮೊಗವೀರ ಮತ್ತು ರತ್ನ ದಂಪತಿಗಳ ಮನೆಗೆ ರಾತ್ರಿ ಮರ ಬಿದ್ದು ಮಾಡು ದ್ವಂಸಗೊಂಡಿದೆ. ರಾಜು ಅವರ ಕೈಯ ಮೂಳೆಮುರಿತವಾಗಿದ್ದು, ತಲೆಗೂ ಘಾಸಿಯಾಗಿದೆ. ಪುತ್ರಿ ಶ್ರೀನಿಧಿ ಅದೃಷ್ಟವಶಾತ್ ಪಾರಾಗಿದ್ದು, ಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿದೆ.

ಬುಧವಾರ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಗಣೇಶ್ ಬ್ರಹ್ಮಾವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಸಿದಾಗ, ಇವರಿಗೆ ತುರ್ತಾಗಿ ಮನೆ ನಿರ್ಮಿಸಿ ಕೊಡಬೇಕಾದ ಅನಿವಾರ್ಯತೆಯನ್ನು ಮನಗಂಡರು. ಜಾಗ ಇವರ ಹೆಸರಿಗಾಗದಿರುವುದರಿಂದ ಸರಕಾರದಿಂದ ಯಾವುದೇ ನೆರವು ಒದಗಿ ಬರುವುದಿಲ್ಲ. ಶ್ರೀನಿಧಿ 92% ಅಂಕಗಳಿಸಿದ್ದು ಬ್ರಹ್ಮಾವರ ಸ.ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಈಕೆಯ ಅಕ್ಕ ಭೂಮಿಕಾಳೂ ಪ್ರತಿಭಾನ್ವಿತೆಯಾಗಿದ್ದು, 1BE‌ಗೆ ಸೇರ್ಪಡೆಗೊಳ್ಳುವ ಹಂತದಲ್ಲಿದ್ದಾಳೆ. ತಂದೆಯದ್ದು ಅಡುಗೆ ಕೆಲಸವಾಗಿದ್ದು, ಈಗ ಅದೂ ಸಾಧ್ಯವಿಲ್ಲ. ತಾಯಿ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕೃತ ಮನೆ ಪಕ್ಕದ ಕೊಟ್ಟಿಗೆಯ ಒಂದು ಭಾಗದಲ್ಲಿ ದಿನ ಕಳೆಯುತ್ತಿದ್ದಾರೆ. ಈರ್ವರು ಪುತ್ರಿಯರೂ ಪ್ರತಿಭಾನ್ವಿತರಾಗಿದ್ದು, ಇವರಿಗೆ ವಿದ್ಯಾಪೋಷಕ್ ವತಿಯಿಂದ ಎರಡು ತಿಂಗಳ ಒಳಗೆ, ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡಲು ಸಂಸ್ಥೆ ಸಂಕಲ್ಪಿಸಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ