ಟಯರ್ ಸ್ಫೋಟಗೊಂಡು ಟೆಂಪೋ ಟ್ರಾವೆಲರ್ ಪಲ್ಟಿ

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟೆಂಪೋ ಟ್ರಾವೆಲರ್ ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ಗುರುವಾರ ಮುಂಜಾನೆ 7ಗಂಟೆಯ ವೇಳೆ ನಡೆದಿದೆ.

ಅಡ್ಯಾರ್‌ನಲ್ಲಿ ಕಾರ್ಯಕ್ರಮ ನಿಮಿತ್ತ ಹೂ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ ಟಯರ್ ಬ್ಲಾಸ್ಟ್ ಆಗಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಾಹನದಲ್ಲಿದ್ದ ಹನ್ನೊಂದು ಮಂದಿ ಡೆಕೋರ್ ಕಾರ್ಮಿಕರು ಅದೃಷ್ಟವಶಾತ್ ಯಾವುದೇ ಗಾಯಾಗಳಾಗದೇ ಪಾರಾಗಿದ್ದಾರೆ. ವಾಹನ ರಸ್ತೆಗೆ ಮಗುಚಿ ಬಿದ್ದು ಅಲಂಕಾರಿಕ ಹೂ ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.

ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು – ಸಚಿವ ಜಾರಕಿಹೊಳಿ