ಆ. 2ರಿಂದ ಮಣಿಪಾಲದಲ್ಲಿ ಮೂರು ದಿನಗಳ ಹಲಸು ಮೇಳ

ಉಡುಪಿ : ಅಂಜನ್ ಕನ್‌ಸ್ಟ್ರಕ್ಷನ್ ಆಶ್ರಯದಲ್ಲಿ ಆ.2ರಿಂದ 4ರವರೆಗೆ ಬೆಳಿಗ್ಗೆೆ 9ರಿಂದ ರಾತ್ರಿ 7ರ ವರೆಗೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಮೂರು ದಿನಗಳ ಹಲಸು ಕೃಷಿ ಮತ್ತು ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಅಕ್ಷತ್ ಪೈ ತಿಳಿಸಿದರು.

ಉಡುಪಿಯಲ್ಲಿಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 2ರಂದು ಬೆಳಿಗ್ಗೆೆ 10.30ಕ್ಕೆೆ ಕಾಂಗ್ರೆೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಉದ್ಯಮಿ ಯತೀಶ್ ಕರ್ಕೇರ ಭಾಗವಹಿಸಲಿದ್ದಾರೆ ಎಂದರು.

ಹಲಸು ಮತ್ತು ಹಲಸಿನಿಂದ ತಯಾರಿಸಿದ ವಿವಿಧ ಬಗೆಯ ಐಸ್‌ಕ್ರೀಂ, ಗಟ್ಟಿ, ಜಾಮ್, ಶೀರಾ, ಹೋಳಿಗೆ ಖಾದ್ಯ ಸಹಿತ ಹಪ್ಪಳ, ಉಪ್ಪಿನಕಾಯಿ, ಚಿಪ್ಸ್ ವಿವಿಧ ಬಗೆಯ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಇರಲಿದೆ. 60ಕ್ಕೂ ಅಧಿಕ ಮಳಿಗೆಗಳು, ಸ್ಥಳೀಯ ಮತ್ತು ಹೊರ ಜಿಲ್ಲೆಯ ಹಲಸು ಕೃಷಿಕರು, ಹಲಸಿನ ಉತ್ಪನ್ನಗಳ ವ್ಯಾಪಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಬಿ. ಅನಂತಕೃಷ್ಣ ಪೈ, ಶೈಲಾ ಪೈ, ತಕ್ಷಕ್ ಪೈ, ಮಹೇಂದ್ರ ರಾವ್ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ