ಬಾಲಕನ ಎದೆಯಿಂದ ಮರದ ತುಂಡು ಹೊರತೆಗೆದ ವೆನ್ಲಾಕ್‌ ವೈದ್ಯರ ತಂಡ…!

ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಹೃದಯ, ಎದೆ ಮತ್ತು ರಕ್ತನಾಳದ ಶಸ್ತ್ರಚಿಕಿತ್ಸೆ ವಿಭಾಗದ ಸಂಪೂರ್ಣ ತಂಡ, ಡಾ. ಸುರೇಶ್ ಪೈರವರು 12 ವರ್ಷದ ಬಾಲಕನ ಎದೆಯಿಂದ ಒಂದು ದೊಡ್ಡ ಮರದ ತುಂಡನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವ ಮೂಲಕ ಅವರ ಅಸಾಧಾರಣ ಕೌಶಲ್ಯ ಮತ್ತು ನಿಷ್ಠೆಗಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂಲತಃ ಅಸ್ಸಾಂ ರಾಜ್ಯದ ಪ್ರಸ್ತುತ ಮಡಿಕೇರಿಯಲ್ಲಿ ಕೆಲಸದಲ್ಲಿದ್ದ ಬಾಲಕ ಬಿದ್ದು ಮರದ ತುಂಡು ಅವನ ಕುತ್ತಿಗೆಗೆ ಪ್ರವೇಶಿಸಿ ಎದೆಯಲ್ಲಿ ಸಿಕ್ಕಿಕೊಂಡಿತ್ತು. ಸಂಜೆ 7.30‌ಕ್ಕೆ ಆಘಾತಕ್ಕೊಳಗಾದ ನಂತರ ಮಧ್ಯರಾತ್ರಿ 12.15‌ಕ್ಕೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆತರಲಾಯಿತು.

ಮಧ್ಯರಾತ್ರಿ 1.30‌ರಿಂದ 3.30‌ರವರೆಗೆ ಶಸ್ತ್ರಚಿಕಿತ್ಸೆ ನಡೆಯಿತು. ಮರದ ತುಂಡಿನ ಜೊತೆಗೆ ಸ್ಟೀಲ್ ಚೈನ್ ಕೂಡ ಸಿಲುಕಿಕೊಂಡಿತ್ತು, ಮರದ ತುಂಡು ಮತ್ತು ಸ್ಟೀಲ್ ಚೈನ್ ಶಸ್ತ್ರಚಿಕಿತ್ಸೆಯಿಂದ ಹೊರತೆಗೆದು ಯುವ ಜೀವವನ್ನು ಉಳಿಸುವಲ್ಲಿ ಸಿಟಿವಿಎಸ್ ವೈದ್ಯಕೀಯ ತಂಡದ ಅಸಾಧಾರಣ ಪ್ರಯತ್ನ ಮಹತ್ತರವಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಫುಟ್ಬಾಲ್‌ ಪಂದ್ಯಾಟದ ವೇಳೆ ಗ್ಯಾಲರಿ ಕುಸಿತ..!

ಎರಡು ಕಾರುಗಳ ನಡುವೆ ಅಪಘಾತ : ನಾಲ್ವರಿಗೆ ಗಾಯ..!