ಪರೀಕ್ಷೆ ವೇಳೆ ವಿದ್ಯಾರ್ಥಿಯ ಐಫೋನ್ ಕಳವು, ದೂರು ದಾಖಲು

ಮಲ್ಪೆ : ಕಲ್ಯಾಣ್‌ಪುರ ಮಿಲಾಗ್ರೀಸ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡಿಕೊಂಡಿರುವ ಶಿವಾಜಿ(20) ಎಂಬವರ ಐಫೋನ್ ಕಳವಾಗಿದ್ದು ದೂರು ದಾಖಲಾಗಿದೆ.

ಇವರ ಕಾಲೇಜಿನಲ್ಲಿ ಪರೀಕ್ಷೆಯಿದ್ದು, ಬೆಳಿಗ್ಗೆ ಪರೀಕ್ಷಾ ಕೊಠಡಿಯ ಒಳಗೆ ಹೋಗುವಾಗ ತನ್ನ ಐ-ಪೋನ್‌15 ಮೊಬೈಲ್‌ ಇರುವ ಬ್ಯಾಗ್‌‌ನ್ನು ಕೊಠಡಿಯ ಹೊರಗಡೆ ಇಟ್ಟು ಹೋಗಿ ಪರೀಕ್ಷೆ ಬರೆದಿದ್ದರು. ಬಳಿಕ ಬಂದು ನೋಡುವಾಗ ಬ್ಯಾಗ್‌ ಇಟ್ಟ ಸ್ಥಳದಲ್ಲಿ ಇಲ್ಲದೆ ಇದ್ದು ಕಾಲೇಜಿನ ವಿದ್ಯಾರ್ಥಿಗಳಾದ ವೀಕ್ಷೀತ್‌ ಮತ್ತು ಆಕಾಶ್‌ ಎಂಬವರು ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ನಂತರ ಕಾಲೇಜಿನ ಬಳಿ ಇರುವ ಚರ್ಚ್‌‌ನ ಬಾವಿಯ ಬಳಿ ಬ್ಯಾಗ್‌ ಪತ್ತೆಯಾಗಿದ್ದು, ಪರಿಶೀಲಿಸಿದಾಗ ಬ್ಯಾಗ್‌‌ನಲ್ಲಿ ಮೊಬೈಲ್‌ ಇರಲಿಲ್ಲ. ಬ್ಯಾಗ್‌ ನಿಖಿಲ್‌ ಎಂಬ ವಿದ್ಯಾರ್ಥಿಯ ಕೈಯಲ್ಲಿ ಇದ್ದ ಬಗ್ಗೆ ಸಿಸಿ ಕ್ಯಾಮರದಲ್ಲಿದ್ದು, ಮೊಬೈಲ್‌‌ನ ಮೌಲ್ಯ ರೂಪಾಯಿ 79,000/- ಆಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ