ಉಡದ ಮುಖದಲ್ಲಿ ಸಿಕ್ಕಿಹಾಕೊಂಡ ತಂಪು ಪಾನೀಯದ ಟಿನ್ – ಒದ್ದಾಟ; ಉರಗ ತಜ್ಞರಿಂದ ರಕ್ಷಣೆ

ಕಾಪು : ಆಹಾರ ಅರಸಿ ಬಂದ ಉಡವೊಂದರ ಮುಖಕ್ಕೆ ತಂಪು ಪಾನೀಯದ ಟಿನ್ ಸಿಕ್ಕಿಕೊಂಡು ಒದ್ದಾಟ ನಡೆಸಿದ ಪ್ರಸಂಗ ನಡೆದಿದೆ. ಕಳೆದ ಎರಡು ದಿನಗಳಿಂದ ಆತ್ತಿಂದಿತ್ತ ಚಲಿಸುತ್ತಿದ್ದ ಉಡವು ತನ್ನ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಕಾಪುವಿನ ದಂಡತೀರ್ಥ ನಡಿಕೆರೆ ರತ್ನಕರ ಶೆಟ್ಟಿ ಅವರ ಜಮೀನಿನಲ್ಲಿ ಈ ಘಟನೆ ನಡೆದಿತ್ತು.

ಕಾಪುವಿನ ಸ್ಥಳೀಯ ಉರಗ ರಕ್ಷಕ ಪ್ರಶಾಂತ್ ಪೂಜಾರಿ ಹಾಗೂ ಶಿವಾನಂದ ಪೂಜಾರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಡವನ್ನು ಹಿಡಿದು ಅದರ ಮುಖಕ್ಕೆ ಅಂಟಿಕೊಂಡ ತಂಪು ಪಾನೀಯದ ಟಿನ್‌ ಅನ್ನು ಸುರಕ್ಷಿತವಾಗಿ ಬಿಡಿಸಿದರು. ಬಳಿಕ ಉಡವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ಪ್ರಾಣಿ ಪಕ್ಷಿಗಳಿಗೂ ನಮ್ಮಂತೆ ಬದುಕುವ ಹಕ್ಕಿದೆ. ಆದ್ದರಿಂದ ತಂಪು ಪಾನೀಯ ಕುಡಿದು ಎಲ್ಲೆಂದರಲ್ಲಿ ಬಿಸಾಡುವ, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ಜನರು ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ