ಜೀವ ಜಡ ಜಗತ್ತನ್ನು ಸೀಮಿತ ಪರಿಧಿಯೊಳಗೆ ಸೆರೆಹಿಡಿಯಬಲ್ಲಾತನೇ ಸಮರ್ಥ ಛಾಯಾಗ್ರಾಹಕ – ಜನಾರ್ದನ್ ಕೊಡವೂರು

ಉಡುಪಿ : ದಿನ ನಿತ್ಯದ ಆಗುಹೋಗುಗಳನ್ನು ತಮ್ಮ ಕ್ಯಾಮರಾ ಕಣ್ಣೊಳಗೆ ಸಮರ್ಪಕವಾಗಿ ಹಿಡಿದಿಡುವ ಸಾಮರ್ಥ್ಯವಿರುವುದು ಛಾಯಾಗ್ರಾಹಕನಿಗೆ ಮಾತ್ರ. ಇಂದು ವಿಶಾಲವಾದ ಜಗತ್ತಿನ ಅತಿದೊಡ್ಡ ಜಾಲವೆನಿಸಿದ ಛಾಯಾಚಿತ್ರಗ್ರಹಣದಲ್ಲಿ ಯುವ ಮನಸ್ಸುಗಳಿಗೆ ವಿಪುಲ ಅವಕಾಶಗಳಿವೆ. ಪತ್ರಿಕೋದ್ಯಮ ಸೇರಿದಂತೆ ಮಾಧ್ಯಮದ ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಯಾಗ್ರಹಣಕ್ಕೆ ಇರುವ ಸವಾಲುಗಳನ್ನು ಗಮನಿಸಿಕೊಂಡು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ನೆಲೆಯೂರುವ ಪ್ರಯತ್ನ ಮಾಡಬೇಕಿದೆ ಎಂದು ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು ಅವರು ಅಭಿಪ್ರಾಯಪಟ್ಟರು.

ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಎನ್‌ಎಸ್‌ಎಸ್ ಸಹಯೋಗದೊಂದಿಗೆ “ಪತ್ರಿಕೋದ್ಯಮದಲ್ಲಿ ಛಾಯಾಚಿತ್ರಗಳ ಪಾತ್ರ” ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ. ಜೆ ಅವರು ವಹಿಸಿಕೊಂಡಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆಯಾದ ಡಾ. ಪ್ರಜ್ಞಾ ಮಾರ್ಪಳ್ಳಿ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

Related posts

SII 2025 ಗ್ರೀನ್ ಶ್ರೇಯಾಂಕಗಳ ಪ್ಲಾಟಿನಂ+ ಬ್ಯಾಂಡ್‌ನಲ್ಲಿ ಮಾಹೆಗೆ ಅಗ್ರ ಸ್ಥಾನ

ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ – ಹೆಚ್ ಡುಂಡಿರಾಜ್​

ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳನ ಬಂಧನ