ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ಸಂಪ್ರದಾಯ

ಕಾರ್ಕಳ : ಆಕಳಿನ ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಇಟ್ಟು ತೂಗುವ ಅಪರೂಪದ ಸಂಪ್ರದಾಯವಿದೆ. ಗೋ ರಕ್ಷಣೆ ಹಾಗೂ ಸಾಕಣೆಯಲ್ಲಿ ಅಪರೂಪದ ಕೆಲಸ ಮಾಡುತ್ತಿರುವ ಕಾರ್ಕಳದ ಅನಂತಕೃಷ್ಣ ಗೋಶಾಲೆಯಲ್ಲಿ ಗೊಕರುವಿಗೆ ಧೋಳಾರೋಹಣ ಸೇವೆ ನೆರವೇರಿತು.

ಹರಕೆಯ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ. ತೊಟ್ಟಿಲು ಸೇವೆಯಿಂದ ಸಂಗ್ರಹವಾಗುವ ಹಣವನ್ನು ಗೋಶಾಲೆಯ ವೆಚ್ಚಗಳಿಗೆ ಬಳಸಲಾಗುತ್ತದೆ. ಪುಟ್ಟ ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ದೃಶ್ಯ ಕಣ್ಮನ ಸೆಳೆಯುತ್ತದೆ. ಅನೇಕ ಮಂದಿ ಹರಕೆಯ ರೂಪದಲ್ಲಿ ಈ ಸೇವೆ ನಡೆಸುತ್ತಾರೆ.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಜಾತಿ ನಿಂದನೆ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ

ಬಜೆಟ್‌ನಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಎಸ್‌‌ಡಿ‌ಪಿ‌ಐ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ