ಶಾಸಕ ಭರತ್ ಶೆಟ್ಟಿ ಮೇಲೆ ಕಾಂಗ್ರೆಸ್ ನಾಯಕರ ಆಣತಿಯಂತೆ ರಾಜಕೀಯ ಪ್ರೇರಿತ ಪ್ರಕರಣ ದಾಖಲು : ವೇದವ್ಯಾಸ ಕಾಮತ್

ಮಂಗಳೂರು : ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಶಾಸಕ ಡಾ.ಭರತ್ ಶೆಟ್ಟಿಯವರ ಮೇಲೆ ಕಾಂಗ್ರೆಸ್ ನಾಯಕರ ಆಣತಿಯಂತೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಾಗಿದ್ದನ್ನು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರವಾಗಿ ಖಂಡಿಸಿದರು.

ವಿದೇಶದಲ್ಲಿದ್ದಾಗ ಭಾರತದ ವಿರುದ್ದ, ಸ್ವದೇಶದಲ್ಲಿದ್ದಾಗ ಹಿಂದೂಗಳ ವಿರುದ್ಧ ಹೇಳಿಕೆ ನೀಡುವ ರಾಹುಲ್ ಗಾಂಧಿಗೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸದೇ ಹಾರ ಹಾಕಿ ಗೌರವಿಸಬೇಕಿತ್ತಾ? ಅಥವಾ ಬಹುಮಾನ ಘೋಷಿಸಬೇಕಿತ್ತಾ? ಕಾಂಗ್ರೆಸ್ಸಿಗರಿಗೆ ಅಂತಹ ದುರ್ಗತಿ ಬಂದಿರಬಹುದು. ನಮ್ಮದು ಎಂದಿಗೂ ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತದ ಹಿನ್ನಲೆ ಹೊಂದಿರುವ ಪಕ್ಷ. ಹಿಂದುತ್ವ ಎನ್ನುವುದು ಈ ರಾಷ್ಟ್ರದ ಮೂಲ ತತ್ವ. ಅದಕ್ಕಾಗಿ ಒಂದಲ್ಲ, ನೂರು ಪ್ರಕರಣಗಳನ್ನು ಎದುರಿಸಲು ಸಿದ್ಧವೆಂದು ಸವಾಲೆಸೆದರು.

ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೊದಲು “ಹಿಂದೂಗಳೆಂದು ಕರೆದುಕೊಳ್ಳುವವರು ಸದಾ ಹಿಂಸಾಚಾರ ಮತ್ತು ದ್ವೇಷವನ್ನು ಹರಡುವವರು, ಹಿಂದೂ ಪದದ ಅರ್ಥವೇ ಅಶ್ಲೀಲ, ಹಿಂದೂ ಭಯೋತ್ಪಾದನೆ, ರಾಮಾಯಣವೇ ಕಟ್ಟು ಕಥೆ” ಮುಂತಾದ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ಮಹಾನಾಯಕರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರಲಿ ಎಂದು ಹೇಳಿ ಕೂಡಲೇ ಶಾಸಕ ಭರತ್ ಶೆಟ್ಟಿಯವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !