ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಉಡುಪಿ : ಮಣಿಪಾಲದ ರಜತಾದ್ರಿ ರಸ್ತೆಯಲ್ಲಿ ಬೈಕ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜನವರಿ 4ರಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಬೈಕ್‌‌ನಲ್ಲಿ ಹಿಂಬದಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುರಿಸಿಕೊಂಡು ಮಣಿಪಾಲ ಹಾಗೂ ರಜತಾದ್ರಿ ರಸ್ತೆಗಳಲ್ಲಿ ಮಾನವ ಜೀವಕ್ಕೆ ತೊಂದರೆ ಮಾಡುವ ರೀತಿಯಲ್ಲಿ ಅಪಾಯಕಾರಿಯಾಗಿ ವಾಹನವನ್ನು ಚಲಾಯಿಸಿದಲ್ಲದೇ ಚಾಲನೆ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ದೃಶ್ಯಾವಳಿಗಳು ವೈರಲ್‌ ಆಗಿತ್ತು.

ಈ ಕುರಿತು ಮಣಿಪಾಲ ಠಾಣಾ ಪಿ.ಐ ದೇವರಾಜ್‌ ಟಿ.ವಿ ನೇತೃತ್ವದ ಪೊಲೀಸ್‌ ಉಪ ನಿರೀಕ್ಷಕರಾದ ಅನೀಲ್‌, ಅಕ್ಷಯ ಕುಮಾರಿ, ಸಿಬ್ಬಂದಿಗಳಾದ ವಿವೇಕ್‌, ಪ್ರಸನ್ನ, ಇಮ್ರಾನ್‌, ಸುರೇಶ್‌ ಶೆಟ್ಟಿ ಹಾಗೂ ಸುಕುಮಾರ್‌ ಶೆಟ್ಟಿ ರುದ್ರವ್ವರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮಹಮ್ಮದ್‌ ಆಶಿಕ್(19) ಆತ್ರಾಡಿ ಗ್ರಾಮ ಈತನನ್ನು ದಸ್ತಗಿರಿ ಮಾಡಿ ವೀಲಿಂಗ್‌ ಮಾಡಲು ಬಳಿಸಿದ ಸ್ಕೂಟರ್‌ನ್ನು ವಶಕ್ಕೆ ಪಡೆದಿದ್ದಾರೆ.

ಆಶಿಕ್ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಣಿಪಾಲ ಪೊಲೀಸರ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Related posts

‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣ – ಪಂಪ ಭಾರತ ಇಂಗ್ಲಿಷ್ ಭಾಷೆಗೆ ಅನುವಾದವಾಗಿರುವುದು ಜಾಗತಿಕ ವಿದ್ಯಾಮಾನ : ಡಾ. ಬಿ.ಎ. ವಿವೇಕ ರೈ

ರಿವಾಲ್ವರ್ ಮಿಸ್ ಫೈರ್ – ಯುವಕನಿಗೆ ಗಾಯ

ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ