ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ಮೂಲದ ವ್ಯಕ್ತಿ ನಾಪತ್ತೆ

ಉಡುಪಿ : ಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಸೆ.22ರಂದು ರಾತ್ರಿ ವೇಳೆ ನಡೆದಿದೆ.

ನಾಪತ್ತೆಯಾದವರನ್ನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಐರಿಂಜಲಕುಡ ನಿವಾಸಿ ಜಯಿವಿಜಯನ್(65) ಎಂದು ಗುರುತಿಸಲಾಗಿದೆ.

ಒಟ್ಟು 33 ಮಂದಿ ಕರ್ನಾಟಕ ರಾಜ್ಯದಲ್ಲಿರುವ ದೇವಾಸ್ಥಾನಗಳಿಗೆ ಭೇಟಿ ನೀಡಲು ಸೆ.20ರಂದು ಕೇರಳದಿಂದ ಹೊರಟಿದ್ದು, ಕೊಲ್ಲೂರು, ಮುರುಡೇಶ್ವರ ದೇವಾಸ್ಥಾನಕ್ಕೆ ತೆರಳಿ ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ್ದರು. ಮಠದಲ್ಲಿ ರಾತ್ರಿ ಊಟ ಮಾಡಿ ಹೊರಗಡೆ ಬಂದಿದ್ದು, ಆ ವೇಳೆ ತಂಡದಲ್ಲಿದ್ದ ಜಯವಿಜಯನ್ ನಾಪತ್ತೆಯಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ