ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ಯುವಕ; ಸ್ನೇಹಾಲಯದಲ್ಲಿ ಆಶ್ರಯ

ಉಡುಪಿ : ತೀವ್ರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ ಕಾಪು ಮೂಲದ ಸಚಿನ್ ಪೂಜಾರಿ (25) ಎಂಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮಾಜ ಸೇವಕ ವಿಶು ಶೆಟ್ಟಿ ಅವರು ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ.

ಕಾಪು ಗರಡಿ ರಸ್ತೆಯ ನಿವಾಸಿಯಾಗಿರುವ ಈತನ ವರ್ತನೆ ಹಾಗೂ ಹಲ್ಲೆಗೆ ಹೆದರಿ ಹೆತ್ತ ತಾಯಿ ಮನೆ ಬಿಟ್ಟು ಬೇರೆ ಕಡೆ ಆಶ್ರಯ ಪಡೆದಿದ್ದಾರೆ. 6 ತಿಂಗಳ ಹಿಂದೆ ಹೆತ್ತ ತಾಯಿಯ ಮೇಲೆಯೇ ಹಲ್ಲೆ ನಡೆಸಿ ಆಕೆಯ ಕಾಲು ಮುರಿದಿದ್ದ ಘಟನೆಯೂ ನಡೆದಿತ್ತು. ಯುವಕನ ತಂದೆ ತೀರಿಕೊಂಡಿದ್ದು, ಈತನ ಮಾನಸಿಕ ಅಸ್ವಸ್ಥತೆಗೆ ಬೇಸತ್ತು ಸಹೋದರ ಆತ್ಮಹತ್ಯೆ ಮಾಡಿದ ದುರಂತವೂ ಸಂಭವಿಸಿತ್ತು. ಅರೆನಗ್ನವಾಗಿ ರಸ್ತೆಯಲ್ಲಿ ತಿರುಗಾಡುತ್ತಾ, ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ಎಸೆಯುತ್ತಾ ಭಯದ ವಾತಾವರಣ ಸೃಷ್ಟಿಸಿದ್ದ ಸಚಿನ್ ಪೂಜಾರಿಯ ದಾಂಧಲೆಯಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಹೊರಗಡೆ ತಿರುಗಾಡಲು ಹೆದರುವಂತಾಗಿತ್ತು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಸ್ಥಳಕ್ಕೆ ಧಾವಿಸಿ, ಯುವಕನನ್ನು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆದರು.
ಬಳಿಕ ಆತನ ತಾಯಿಯ ಕೋರಿಕೆಯ ಮೇರೆಗೆ ಯುವಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ