ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಉಡುಪಿ : ಇಂದ್ರಾಳಿಯ ರೈಲ್ವೆ ಸೇತುವೆ ಬಳಿ, ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಗಂಡಸಿನ ಶವವು ಗುರುವಾರ‌ ರಾತ್ರಿ ಪತ್ತೆಯಾಗಿದೆ.

ವ್ಯಕ್ತಿಯು ಚಲಿಸುತ್ತಿರುವ ರೈಲಿಗೆ ಅಡ್ಡಬಂದು ಆತ್ಮಹತ್ಯೆಗೈದಿರುವ‌ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯನ್ನು ಮೂಡಸಗ್ರಿಯ ನೀಲಾದರ ನಾಯ್ಕ ಎಂದು ಶಂಕಿಸಲಾಗಿದೆ.

ಸಮಾಸಸೇವಕ‌ ನಿತ್ಯಾನಂದ ಒಳಕಾಡುವರು ಇಲಾಖೆಯ ಕರೆಗೆ ಧಾವಿಸಿ ಬಂದು, ಟಾರ್ಚ್ ಬೆಳಕಿನ ಸಹಕಾರದಿಂದ ಛಿದ್ರ ದೇಹವನ್ನು ಒಟ್ಟುಗೂಡಿಸಿ, ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾದರು.

ಮಣಿಪಾಲ ಪೋಲಿಸ್ ಠಾಣೆಯ ಹೆಡ್ ಕಾನ್ಸಟೇಬಲ್ ಶ್ರವಣ ಕುಮಾರ್, ಹೆಡ್ ಕಾನ್ಸಟೇಬಲ್ ಗುರುರಾಜ್, ರೈಲ್ವೆ ಆರ್.ಪಿ.ಎಫ್ ಮಧುಸೂದನ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ