ಕೆಪಿಟಿ ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ಮೇಲೆ ಹರಿದ ಲಾರಿ – ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಮಂಗಳೂರು : ನಗರದ ಕೆಪಿಟಿ ಪೆಟ್ರೋಲ್ ಬಂಕ್‌ನಲ್ಲಿ‌ ಬೈಕ್ ಮೇಲೆಯೇ ಲಾರಿ ಹರಿದು ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಶೋಕ್‌ ಗಂಭೀರ ಗಾಯಗೊಂಡಿದ್ದಾರೆ.

ಯೆಯ್ಯಾಡಿಯಿಂದ ಕೆಪಿಟಿ ಜಂಕ್ಷನ್‌ನ ಸಪ್ತಗಿರಿ ಪೆಟ್ರೋಲ್ ಬಂಕ್ ಕಡೆಗೆ ಬೈಕ್ ಸವಾರ ಅಶೋಕ್ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಬಂಕ್ ಕಡೆಗೆ ಬರುತ್ತಿದ್ದ ಗೂಡ್ಸ್ ಲಾರಿ ಏಕಾಏಕಿ ಎಡಬದಿಗೆ ತಿರುಗಿದೆ‌. ಪರಿಣಾಮ ಅಲ್ಲಿಯೇ ಬರುತ್ತಿದ್ದ ಬೈಕ್‌‌ಗೆ ಡಿಕ್ಕಿಯಾಗಿ ಬೈಕ್ ಮೇಲೆಯೇ ಹರಿದಿದೆ. ಇದರಿಂದ ಬೈಕ್ ಸವಾರನ ಸೊಂಟ ಹಾಗೂ ಬಲಗೈ ಮೇಲೆಯೇ ಲಾರಿಯ ಮುಂಭಾಗದ ಚಕ್ರ ಹರಿದಿದೆ.

ಲಾರಿ ಹರಿದಿದ್ದರಿಂದ ಗಂಭೀರ ಸ್ವರೂಪದ ಗಾಯಗೊಂಡ ಬೈಕ್ ಸವಾರ ಅಶೋಕ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ‌ ಚಾಲಕನ‌ ನಿರ್ಲಕ್ಷ್ಯ‌ದ ಚಾಲನೆಯೇ ಘಟನೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ