ಪುತ್ತೂರಿನ ಬೆಳ್ಳಿಪ್ಪಾಡಿಗೆ ಪ್ರವೇಶಿಸಿದ ಒಂಟಿ ಸಲಗ

ಮಂಗಳೂರು : ಕಳೆದ ಒಂದು ವಾರದಿಂದ ಪುತ್ತೂರು ತಾಲೂಕಿನ ಪಾಲ್ತಾಡಿ ಸವಣೂರು ಭಾಗದಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗ ಎರಡು ದಿನದ ಹಿಂದೆ ಶಾಂತಿಗೋಡು ಗ್ರಾಮದ ವೀರಮಂಗಲಕ್ಕೆ ದಾಂಗುಡಿ ಇಟ್ಟಿತ್ತು. ಆದರ ಇನ್ನಷ್ಟು ಉತ್ತರಾಭಿಮುಖವಾಗಿ ಚಲಿಸಿರುವ ಆನೆ ಇಂದು ಬೆಳಿಗ್ಗೆ ಉಪ್ಪಿನಂಗಡಿ ಹೋಬಳಿ ಪ್ರವೇಶಿಸಿದೆ. ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಪ್ಪಾಡಿ ಬಳಿ ಬಾರ್ತೋಲಿ ಎಂಬ ತೋಟದಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಈ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿದ್ದ ಈ ಆನೆ ಕೇರಳದಿಂದ ಬಂದಿದೆ ಎಂದು ಹೇಳಲಾಗುತ್ತಿದೆ.

ಜೂ.3ರಂದು ಪಾಲ್ತಾಡಿ ಗ್ರಾಮದ ಅಸಂತಡ್ಕ, ಖಂಡಿಗೆಗೆ ಆಗಮಿಸಿದ ಆನೆ ಜೂ.4ರಂದು ರಾತ್ರಿ ಮಲೆಮಾಡಾವಿನಲ್ಲಿ ಕೃಷಿಕರ ತೋಟಕ್ಕೆ ನುಗ್ಗಿತ್ತು.

ಜೂ.7ರಂದು ಪುಣ್ಯಪ್ಪಾಡಿ ಗ್ರಾಮದ ಬೆದ್ರಂಪಾಡಿ ಅರಣ್ಯದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಪುಪ್ಪಾಡಿ ಗ್ರಾಮದ ಕುಚ್ಚೆಜಾಲು ಮೂಲಕ ಸವಣೂರು ಗ್ರಾಮಕ್ಕೆ ಬಂದಿತ್ತು. ಬಳಿಕ ಅದು ವೀರ ಮಂಗಲದತ್ತ ಪ್ರಯಾಣ ಬೆಳೆಸಿ ಜೂ 10ರಂದು ಶಾಂತಿಗೋಡು ತಲುಪಿತ್ತು. ಇದೀಗ ಅಲ್ಲಿಂದ ಹೊಳೆ ಬದಿಯಿಂದಲೇ ಸಾಗಿ, ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಎಂಬಲ್ಲಿಗೆ ತಲುಪಿದೆ. ಸದ್ಯ ಆನೆ ಕೊಡಿಮರದಲ್ಲಿದೆ ಎಂದು ತಿಳಿದುಬಂದಿದೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಷೇರು ಟ್ರೇಡಿಂಗ್‌ ಹೆಸರಲ್ಲಿ 38,53,961 ರೂ. ವಂಚನೆ