ಮಾನವ ಸರಪಳಿಯಲ್ಲಿ ಅನಾವರಣಗೊಳ್ಳಲಿದೆ ಒಂದು ಕಿ. ಮೀ. ಉದ್ದದ ರಾಷ್ಟ್ರಧ್ವಜ

ಉಡುಪಿ : ರವಿವಾರ ಜಿಲ್ಲೆಯಲ್ಲಿ ರಚನೆಯಾಗಲಿರುವ 100 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ತಲಾ 500 ಮೀಟರ್‌ನ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಅನಾವರಣಗೊಳ್ಳಲಿದೆ.

ಎರಡು ಧ್ವಜಗಳನ್ನು ನುರಿತ ದರ್ಜಿಗಳು ಸಿದ್ಧಪಡಿಸಿದ್ದು, ಇದರ ರೋಲಿಂಗ್‌ ಕಾರ್ಯ ಹಂತಹಂತವಾಗಿ ವಿದ್ಯಾರ್ಥಿಗಳಿಂದ ನಡೆಯುತ್ತಿದೆ. ಮಾನವ ಸರಪಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು ಸಹಿತ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಕಿನ್ನಿಮೂಲ್ಕಿ ಸ್ವಾಗತ ಗೋಪುರದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಹಿಡಿದು ಸಂಭ್ರಮಿಸುವರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಐಟಿಡಿಪಿ ಹಾಸ್ಟೆಲ್‌ಗ‌ಳ ವಿದ್ಯಾರ್ಥಿಗಳು ಬಾವುಟವನ್ನು ಹಿಡಿಯುವರು. ಎಲ್ಲ ಇಲಾಖೆ ಹಾಸ್ಟೆಲ್‌ಗ‌ಳ ಮೇಲ್ವಿಚಾರಕರಿಗೆ ಈ ಬಗ್ಗೆ ಮೇಲುಸ್ತುವಾರಿ ವಹಿಸಲಾಗಿದೆ. ಇದರೊಂದಿಗೆ ಹಾಸ್ಟೆಲ್‌ ಸಿಬಂದಿ, ಕರಾಟೆ ತರಬೇತು ನೀಡುವ ಮಾರ್ಗದರ್ಶಕರು ಭಾಗವಹಿಸಲಿದ್ದಾರೆ.

500 ಮೀ. ಉದ್ದದ ಧ್ವಜದ ಫೋಲ್ಡಿಂಗ್‌ ಮತ್ತು ಅನ್‌ಫೋಲ್ಡಿಂಗ್‌ ಸವಾಲಿನ ಕೆಲಸವಾಗಿದ್ದು, ರಾಷ್ಟ್ರ ಮತ್ತು ನಾಡ ಧ್ವಜದ ಘನತೆಗೆ ಕುತ್ತು ಬಾರದಂತೆ ಈ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ 100 ಸಿಬಂದಿಯು ವಿದ್ಯಾರ್ಥಿಗಳಿಗೆ ಸಾಥ್‌ ನೀಡಲಿದ್ದಾರೆ. ಎರಡು ಧ್ವಜ ಹಾರಾಟ‌ವನ್ನು ವ್ಯವಸ್ಥಿತವಾಗಿಸಲು ಕ್ರೀಡಾ ಇಲಾಖೆಯ ಡಾ| ರೋಶನ್‌ ಶೆಟ್ಟಿ, ಕೆಬಿಕೆ ಕರಾಟೆ ಸಂಸ್ಥೆಯ ರವಿ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ