ನಗರದ ಮಧ್ಯೆ ತಲೆ ಎತ್ತಲಿದೆ ಜಪಾನಿನ “ಮಿಯಾವಾಕಿ” ಅರಣ್ಯ ಮಾದರಿಯ ಕಾಡು

ಉಡುಪಿ : ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವದಾದ್ಯಂತ ವಿವಿಧ ಕೆಲಸಗಳು ಪರಿಸರವಾದಿಗಳಿಂದ ನಡೆಯುತ್ತಿರುವ ಸಂದರ್ಭದಲ್ಲಿಯೇ ಉಡುಪಿಯಲ್ಲಿ ನಗರದ ಮಧ್ಯದಲ್ಲಿ ಕಾಡೊಂದನ್ನು ಬೆಳೆಸಲು ಸಮಾನ ಮನಸ್ಕರ ತಂಡ ಸಜ್ಜಾಗಿದೆ. ಉಡುಪಿಯಲ್ಲಿ ಕೆಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಸಮಾನ ಉದ್ದೇಶವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಅವಿನಾಶ್ ಕಾಮತ್, ಉರಗ ತಜ್ಞ ಗುರುರಾಜ್ ಸನಿಲ್, ರವಿರಾಜ್ ಹೆಚ್‌.ಪಿ. ಮತ್ತವರ ತಂಡ ಇದೀಗ ಜಪಾನಿನ “ಮಿಯಾವಾಕಿ” ಅರಣ್ಯ ಮಾದರಿಯನ್ನು ಉಡುಪಿ ನಗರದಲ್ಲಿ ನಿರ್ಮಿಸುತ್ತಿದ್ದಾರೆ. ಉಡುಪಿ ನಗರದ ಕಡಿಯಾಳಿ ಪ್ರೌಡಶಾಲೆಯ ಆವರಣದಲ್ಲಿ ಸುಮಾರು 1.5 ಸೆಂಟ್ಸ್ ಜಾಗದಲ್ಲಿ ಈ ಮಿಯಾವಾಕಿ ಅರಣ್ಯ ತಲೆ ಎತ್ತಲಿದೆ.

ಉಡುಪಿಯಲ್ಲಿ ಮೊದಲ ಬಾರಿಗೆ ಎಂಬಂತೆ ಈ ಮಿಯಾವಾಕಿ ಅರಣ್ಯ ತಲೆ ಎತ್ತಲಿದೆ, ಮಂಗಳೂರು ಮೂಲದ ಪರಸರವಾದಿ ಜೀತ್ ಮಿಲನ್ ರೊಚ್ ಈ ಮಿಯಾವಕಿ ಅರಣ್ಯವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಕಡಿಯಾಳಿಯಲ್ಲಿ ಬೆಳೆಸಲು ಉದ್ದೇಶಿಸಿರುವ ಮಿಯಾವಾಕಿ ಅರಣ್ಯದಲ್ಲಿ ಸುಮಾರು 60 ಜಾತಿಯ ಗಿಡಗಳನ್ನು ನೆಡಲಾಗಿದೆ. ಪ್ರಕೃತಿಯ ಸಂರಕ್ಷಣೆಯ ಜೊತೆಗೆ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸುವಲ್ಲಿ ಇಟ್ಟ ಹೆಜ್ಜೆ ಶ್ಲಾಘನಾರ್ಹ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ