ಕಾರಿನ ಬಾನೆಟ್‌ ಒಳಗೆ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ!

ಬೈಂದೂರು : ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್‌ ಒಳಗೆ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.

ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಅವರ ಕಾರಿನ ಬೋನೆಟ್ ಒಳಗೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತು. ಎಂದಿನಂತೆ ಕಾರು ಚಲಾಯಿಸುತ್ತಾ ಬರುತ್ತಿರುವಾಗ ದಾರಿ ಮಧ್ಯದಲ್ಲಿ ಕಾರಿನ ಬೋನೆಟಿನಲ್ಲಿ ವಿಪರೀತ ಶಬ್ದವಾಗಿದೆ. ಇಳಿದು ಗಮನಿಸಿದಾಗ 12 ಫೀಟ್ ಉದ್ದದ ಗಾತ್ರದ ಹೆಬ್ಬಾವು ಇರುವುದು ಕಾಣಿಸಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರು. ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ಆಗಮಿಸಿ ಕಾರಿನ ಬೋನಟ್ ಒಳಗಿರುವ ಹೆಬ್ಬವನ್ನು ಸತತ ಕಾರ್ಯಾಚರಣೆಯಿಂದ ಹೊರತೆಗೆದರು.

ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರ ಸಹಾಯ ಪಡುಕೊಂಡು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ
ಅರಣ್ಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ