ಮನೆಯಲ್ಲಿದ್ದ 31 ಲಕ್ಷ ಬೆಲೆಬಾಳುವ ಚಿನ್ನ ಕದ್ದು ಪರಾರಿಯಾದ ಹೋಮ್ ನರ್ಸ್

ಉಡುಪಿ : ವೃದ್ದೆಯೊಬ್ಬರ ಆರೈಕೆಗಾಗಿ ನಿಯೋಜನೆಗೊಂಡಿದ್ದ ಹೋಮ್ ನರ್ಸ್ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಬಡಗುಬೆಟ್ಟುವಿನ ಪ್ರಸಾದ್ (57) ಎಂಬುವರು 15 ದಿನಗಳ ಹಿಂದೆ ಉಡುಪಿಯ ಪರ್ಕಳ ಪ್ರದೇಶದಲ್ಲಿನ ಹೆಲ್ತ್ ಕೇರ್ ಸರ್ವಿಸ್ ಮೂಲಕ ಹೋಮ್ ನರ್ಸ್ ಸಿದ್ದಪ್ಪ ಕೆ ಕೋಡ್ಲಿ ಅವರನ್ನು ತಮ್ಮ ತಂದೆಯ ಆರೈಕೆಗಾಗಿ ನೇಮಿಸಿಕೊಂಡಿದ್ದರು. ನವೆಂಬರ್ 17ರಂದು, ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 1:15 ರ ನಡುವೆ, ಸಿದ್ದಪ್ಪ ಅವರು ಮನೆಯ ಹಾಲ್‌ನ ಗಾಜಿನ ರ‍್ಯಾಕ್‌ನಲ್ಲಿ ಇರಿಸಲಾಗಿದ್ದ ಅಂದಾಜು 43,800 ಮೌಲ್ಯದ 6 ಗ್ರಾಂ ವಜ್ರದ ಕಿವಿಯೋಲೆಯನ್ನು ಕದ್ದಿದ್ದಾರೆ. ಜೊತೆಗೆ ಮಲಗುವ ಕೋಣೆಯಲ್ಲಿದ್ದ ರಹಸ್ಯ ಲಾಕರ್‌ನಿಂದ 31,17,100 ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳುವಾದ ವಸ್ತುಗಳ ಒಟ್ಟು ತೂಕ 427 ಗ್ರಾಂ ಎಂದು ಅಂದಾಜಿಸಲಾಗಿದೆ.

ಪ್ರಸಾದ್‌ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ