ಮಹಿಳೆಯ ಚಿಕಿತ್ಸೆಗೆ ಬೇಕಾಗಿದೆ ನೆರವಿನ ಹಸ್ತ..!!

ಕಾರ್ಕಳ : ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಾಲ್ ಬೆಟ್ಟು ಗ್ರಾಮದ ಮಲೆನಾಡಿನ ತಪ್ಪಲಲ್ಲಿ ವಾಸಿಸುತ್ತಿರುವ ದೇವಿ ಕೃಪಾ (ಪಾಲೆ ಮನೆ) ನಿವಾಸಿ ವಾಸುದೇವಾಡಿಗ ಇವರ ಮೂರು ಮಕ್ಕಳ ಪೈಕಿ ಎರಡನೇ ಮಗಳು ಮಮತ 40 ವರ್ಷ, (ವಿವಾಹಿತೆ) ಇವರಿಗೆ ಎಂಟು ತಿಂಗಳ ಹಿಂದೆ ನಾಲಗೆ ಮೇಲೆ ಸಣ್ಣ ಗುಳ್ಳೆ ಎದ್ದು ಕಾಲಕ್ರಮೇಣ ದೊಡ್ಡದಾಗುತ್ತಾ ಹೋದಾಗ ವೈದ್ಯರನ್ನು ಸಂಪರ್ಕಿಸಿದಾಗ ಇದು ಕ್ಯಾನ್ಸರ್ ಲಕ್ಷಣ ಎಂದು ವೈದ್ಯರು ತಿಳಿಸಿದರು

ಇಂಗ್ಲಿಷ್ ಮದ್ದು ಮಾಡಲು ಕಷ್ಟ ಆದ ಕಾರಣ ಹಳ್ಳಿಯ ಮದ್ದು ಮೊರೆ ಹೋದರು ಆದರೂ ಇದರ ಲಕ್ಷಣ ಜೋರಾದಾಗ ಬಿ.ಸಿ.ರೋಡಿನ ಆಯುರ್ವೇದಿಕ್ ಡಾಕ್ಟರ್ ಬಳಿ ಮದ್ದು ಮಾಡುತ್ತಾ ಇದ್ದಾಗ ಸ್ವಲ್ಪ ಗುಣಮುಖರಾಗಿದ್ದರು.

ಆದರೆ ಇದೀಗ ಮತ್ತೆ ಸಮಸ್ಯೆ ಉಲ್ಬಣಿಸಿದಾಗ ಸೋಮವಾರಪೇಟೆಯ ಆಯುರ್ವೇದಿಕ್ ಡಾಕ್ಟರನ್ನು ಸಂಪರ್ಕಿಸಿದಾಗ ನಾಲ್ಕನೇ ಸ್ಟೇಜ್‌ನಲ್ಲಿ ಇರುವುದು ದೃಢಪಟ್ಟಿತ್ತು .

ಈಗಾಗಲೇ ಚಿಕಿತ್ಸೆಗೆ 5 ಲಕ್ಷಕ್ಕಿಂತ ಮಿಕ್ಕಿ ಖರ್ಚಾಗಿದ್ದು ಇವರು ಎಲ್ಲಾ ಕಡೆ ಸಾಲ ಮೂಲ ಮಾಡಿದ್ದು ಇನ್ನು ಮುಂದಿನ ಚಿಕಿತ್ಸೆ ಮತ್ತು ತಮ್ಮ ಏಳನೇ ತರಗತಿ ಕಲಿತಿರುವ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ದಿಕ್ಕೇ ತೋಚದೇ ನಿಮ್ಮೆಲ್ಲರ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ.

ತನ್ನ ಹೆಂಡತಿಯ ಚಿಕಿತ್ಸೆಗೆ ಸಹಾಯ ಮಾಡಲು ನೀವು ಕೊಡುವ ಒಂದೊಂದು ರೂಪಾಯಿ ಅಮೂಲ್ಯ ವಾದುದು ಎಂದು ನಿಮ್ಮಲ್ಲಿ ಬೇಡಿಕೊಳ್ಳುತ್ತಿದಾರೆ.

ಇವರಿಗೆ ಸಹಾಯ ಮಾಡ ಬಯಸುವ ಸಹೃದಯ ದಾನಿ‌ಗಳು ಈ ಕೆಳಗಿನ ಬ್ಯಾಂಕ್ ಖಾತೆ ನೇರ‌ವಾಗಿ ಧನ ಸಹಾಯ ಮಾಡಬಹುದಾಗಿದೆ

Name : Mamatha

A/c No : 520291021207108

IFSC COD : UBIN0575026041

Branch : NARAVI

ಹೆಚ್ಚಿನ ಮಾಹಿತಿಗೆ ಸಂಜೀವ ದೇವಾಡಿಗ (ಗಂಡ) ಮೊಬೈಲ್ 7892275853 ಸಂಪರ್ಕಿಸಲು ಮನವಿ ಮಾಡಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ