ವೈವಿಧ್ಯತೆಯಿಂದ ಸುಖಕರ ಜೀವನ ಸಾಧ್ಯ : ಕೇರಳ ರಾಜ್ಯಪಾಲ ಆರೀಫ್ ಖಾನ್

ಉಡುಪಿ : ವೈವಿಧ್ಯತೆ ನಮ್ಮ ಪ್ರಕೃತಿಯ ನಿಯಮ. ಈ ವೈವಿಧ್ಯತೆ‌ಯಿಂದಲೇ ನಾವೆಲ್ಲರೂ ಸುಖಕರವಾಗಿರುವುದಕ್ಕೆ ಸಾಧ್ಯ ಎಂದು ಕೇರಳ ರಾಜ್ಯಪಾಲ ಮುಹಮ್ಮದ್ ಆರೀಫ್ ಖಾನ್ ಹೇಳಿದ್ದಾರೆ.

ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ರವಿವಾರ ರಾಜಾಂಗಣದಲ್ಲಿ ನಡೆದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಮಾತನಾಡಿ ಸಂಸ್ಕೃತ ಸರಳ, ಸುಂದರ ಮತ್ತು ಸುಲಭವಾದ ಭಾಷೆಯಾಗಿದ್ದು, ಇದು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲಾ ಭಾಷೆ‌ಗಳ ಮೂಲ ಮತ್ತು ಜನನಿ ಸಂಸ್ಕೃತವಾಗಿದೆ. ಇದು ಕೇವಲ ಭಾರತೀಯ ಭಾಷೆಗಳ ಮೂಲವಲ್ಲದೇ ಆಂಗ್ಲಭಾಷೆಯ ಮೂಲವೂ ಆಗಿದೆ ಎಂದು ಅವರು ತಿಳಿಸಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡಿದರು. ಶಾಸಕರಾದ ಯಶಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ