ವಾಹನ ಪರವಾನಗಿ ರಹಿತ, ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಸವಾರನಿಗೆ 22,500 ರೂ. ದಂಡ

ಭಟ್ಕಳ : ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಸವಾರನಿಗೆ ಭಟ್ಕಳ ಜೆ‌ಎಂ‌ಎಫ್‌ಸಿ ನ್ಯಾಯಾಲಯವು ಬುಧವಾರ 22,500 ರೂ. ದಂಡ ವಿಧಿಸಿದೆ.

ಡಿ.31‌ರಂದು ಭಟ್ಕಳದ ಪಿ.ಎಲ್.ಡಿ ಬ್ಯಾಂಕ್ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪಿ.ಎಸ್‌.ಐ. ನವೀನ ನಾಯ್ಕ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು.

ಭೋರಾಸಿಂಗ್ ಎಂಬ ವ್ಯಕ್ತಿ ಬೈಕ್ ಚಲಾಯಿಸಿಕೊಂಡು ಬರುವ ವೇಳೆ ಪಿಎಸ್‌ಐ ಪರಿಶೀಲನೆ ನಡೆಸಿದ್ದರು. ಈ ವೇಳೆ ಸವಾರ ಮದ್ಯ ಸೇವನೆ ಮಾಡಿದ್ದು ದೃಢಪಟ್ಟಿತ್ತು. ಬೈಕ್‌ ಸವಾರನ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪ್ರಮಾಣ ಪತ್ರ ಹೊಂದದೇ ಇದ್ದದ್ದು. ಅಪಾಯಕಾರಿ ಚಾಲನೆ, ಹೆಲೈಟ್ ಧರಿಸದೇ ಇರುವುದು ಹಾಗೂ ಪೊಲೀಸ್ ಅಧಿಕಾರಿ‌ಯವರೊಂದಿಗೆ ಅನುಚಿತ ವರ್ತನೆ ತೋರಿದ ಕುರಿತು ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ವಾಹನ ಚಾಲಕನ ವಿರುದ್ಧ ಪ್ರಧಾನ (ಸಿ.ಜೆ ) ಹಾಗೂ ಜೆ‌ಎಂ‌ಎಫ್‌ಸಿ ನ್ಯಾಯಾಲಯ ಭಟ್ಕಳ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ಅಂತಿಮ ವರದಿ ಸಲ್ಲಿಸಿದ ಮೇರೆಗೆ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾದೀಶರು ತಪ್ಪಿತಸ್ಥ ಚಾಲಕನಿಗೆ 22,500 ರೂ. ದಂಡ ವಿಧಿಸಿದ್ದಾರೆ.

Related posts

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು