ಪುಟ್ಟ ಮಗುವಿನೊಂದಿಗೆ ಸೇತುವೆ ಮೇಲೇರಿದ ತಂದೆ – ಆತ್ಮಹತ್ಯೆಗೆ ಯತ್ನ..?

ಮಂಗಳೂರು : ತನ್ನ ಪುಟ್ಟ ಮಗುವನ್ನೆತ್ತಿಕೊಂಡು ತಂದೆಯೋರ್ವನು ಗುರುಪುರ ನದಿಯ ಸೇತುವೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಕೈಕಂಬದ ನಿವಾಸಿ ಸಂದೀಪ್ ಎಂಬವರು ತಮ್ಮ 2ವರ್ಷದ ಮಗುವನ್ನೆತ್ತಿಕೊಂಡು ಗುರುಪುರ ಸೇತುವೆಯ ಮೇಲೇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆಂದು ತಿಳಿದು ಉಪಾಯದಿಂದ ಮನವೊಲಿಸಿ ಮಗು ಸಹಿತ ಅವರನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯನ್ನು ಮೇಲೇರಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಅವರಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು