ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವದ ಮೊರೆ ಹೋದ ಪಾಕಿಸ್ತಾನ ಮೂಲದ ಕುಟುಂಬ

ಉಡುಪಿ : ಉಡುಪಿಯ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಪಾಕಿಸ್ತಾನ ಮೂಲದ ಕುಟುಂಬವೊಂದು ಇಂದು ಆಗಮಿಸಿ ಪೂಜೆ ಸಲ್ಲಿಸಿದೆ.

ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್‌ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಇಲ್ಲಿಗೆ ಆಗಮಿಸಿದ್ದಾರೆ.

ಸದ್ಯ ಮುಂಬೈನಲ್ಲಿ ನೆಲೆಸಿರುವ ಕುಟುಂಬವು ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಆಗಮಿಸಿ ದೈವಕ್ಕೆ ಸೇವೆ ಸಲ್ಲಿಸಿತು. ಈ ಕುಟುಂಬದ ಸದಸ್ಯನೊಬ್ಬ ದೈಹಿಕ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ.

ಆದಿತ್ಯ ಸಿಂಘಾನಿಯಾ ಎಂಬ ಹೆಸರಿನ ಯುವಕ ಎಂಬಿಎ ಪದವೀಧರನಾಗಿದ್ದು ಕಾಯಿಲೆಯಿಂದಾಗಿ ಉದ್ಯೋಗ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಯುವಕ ದೈವಕ್ಕೆ ಪೂಜೆ ಸಲ್ಲಿಸಿದ್ದಾನೆ. ಪೂಜೆಯ ಬಳಿಕ ದರ್ಶನ ಸೇವೆಯ ಮೂಲಕ ಸಂಕಷ್ಟಕ್ಕೆ ಪರಿಹಾರಕ್ಕಾಗಿ ದೈವಕ್ಕೆ ಮೊರೆ ಇಟ್ಟಿದ್ದಾನೆ. ದೈವವು ಈ ಯುವಕನ ಕಾಯಿಲೆ ನಿವಾರಣೆಗೆ ಪೂಜೆಯ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ಹೇಳಿದೆ.

Related posts

ಉಡುಪಿ ಜಿಲ್ಲೆಯಲ್ಲಿ 180 ಹೊಸ ಬಿಎಸ್‌ಎನ್‌ಎಲ್ ಟವರ್‌ಗೆ ಬೇಡಿಕೆ: ಕೋಟ ಶ್ರೀನಿವಾಸ ಪೂಜಾರಿ

ಕೆಲಸಕ್ಕೆಂದು ಹೋದ ಯುವಕ ಮರಳಿ ಬಾರದೇ ನಾಪತ್ತೆ

ಪರಾರಿಯಾಗಲು ಯತ್ನಿಸಿದ ಆರೋಪಿಯ ರಾದ್ಧಾಂತ : ಸರಣಿ ಅಪಘಾತ, ಪೊಲೀಸರಿಂದ ಸಿನಮೀಯ ಶೈಲಿಯಲ್ಲಿ ಬಂಧನ