ಚಿರತೆಯ ಹಾವಳಿಗೆ ಸಾಕು ನಾಯಿ ಬಲಿ

ಉಡುಪಿ : ಉಡುಪಿಯ ಪೆರ್ಡೂರು ಸಮೀಪ ಚಿರತೆಯ ದಾಳಿಯಿಂದ ಜನತೆ ಆತಂಕಗೊಂಡಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಿರತೆಗಳು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಇತ್ತೀಚಿಗೆ ಪೆರ್ಡೂರು ಗೋರೇಲ್‌ನಲ್ಲಿ ಹರಿನಾರಾಯಣ ಭಂಡಿಯವರ ಮನೆಯ ಸಾಕು ನಾಯಿ ಚಿರತೆಯ ಹಾವಳಿಗೆ ಬಲಿಯಾದ್ದು ಸ್ಥಳೀಯರಲ್ಲಿ ಭಯ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಜನರು ತಮ್ಮ ಮನೆಯ ಪರಿಸರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ