ಶಸ್ತ್ರ ಚಿಕಿತ್ಸೆ ಮೂಲಕ 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಉಡುಪಿ : ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಸುಮಾರು 8 ಕೆಜಿ ಗಡ್ಡೆಯನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.

ಕಾರ್ಕಳದ ನಿವಾಸಿ ಪುಷ್ಪಾ (71) ಅವರ ಭುಜದ ಭಾಗದಲ್ಲಿ ಈ ಗಡ್ಡೆ ಇತ್ತು. ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸ ತಜ್ಞ ಡಾ| ಸುಜಿತ್‌ ಅವರು ತಮ್ಮ ತಂಡದೊಂದಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ.

ಆಸ್ಪತ್ರೆಯ ಜನರಲ್‌ ಸರ್ಜನ್‌ ಆಗಿರುವ ಡಾ| ಸುಜಿತ್‌ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ| ಉಮೇಶ್‌ ಉಪಾಧ್ಯಾಯ ಹಾಗೂ ಡಾ| ವಿಶ್ವನಾಥ್‌ ಶೆಟ್ಟಿ ಹಾಗೂ ನುರಿತ ಶುಶ್ರೂಷಕ ಅಧಿಕಾರಿಗಳ ಸಹಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ