ಸಾವಿನಲ್ಲೂ ಒಂದಾದ ದಂಪತಿ

ಕಟಪಾಡಿ : ಒಂದು ದಿನದ ಅಂತರದಲ್ಲಿ ದಂಪತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆಯು ಉದ್ಯಾವರದಲ್ಲಿ ಶುಕ್ರವಾರ ನಡೆದಿದೆ.

ಕಾರ್ಕಳ ತಾಲೂಕು ಬೈಲೂರು ಮೈನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್‌ ರೆಬೆಲ್ಲೋ (56)ಅವರು ನ.28ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್‌ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿಧನ ಹೊಂದಿದರು.

ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಉದ್ಯಾವರ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ದೇವಾಲಯದ ಪಾಲನ ಮಂಡಳಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ, ವಾರ್ಡ್‌ನ ಗುರಿಕಾರರಾಗಿದ್ದ ಮೃತರು ಉದ್ಯಾವರ ಬೋಳಾರಗುಡ್ಡೆ ಕಲಾಯಿಬೈಲ್‌ ನಿವಾಸಿ. ಉದ್ಯಾವರ ಮಂಡಲ ಪಂಚಾಯತ್‌ ಸದಸ್ಯರಾಗಿ, ಒಂದು ಅವಧಿಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾಗಿ, ಸುಮಾರು ಮೂರು ದಶಕಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ