ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ಕಾಪು : ಸೆಕೆಂಡ್ ಹ್ಯಾಂಡ್ ಬಸ್ ಅನ್ನು ಅದರ ಹಿಂದಿನ ಮಾಲೀಕ ಹಾಗೂ ಆತನ ತಂದೆ ಕಳ್ಳತನ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ, ತುಮಕೂರಿನ ಕೊರಟಗೆರೆ ತಾಲೂಕಿನ ಸೈಯದ್ ಗೌಸ್ ಹೆಚ್. ಎಸ್ ಮೋಸ ಹೋದವರು.

ಓಎಲ್‌ಎಕ್ಸ್‌ನಲ್ಲಿ ಸಿಕ್ಕ ನಂಬರ್ ಮೂಲಕ ಕೊರಟಗೆರೆ ತಾಲೂಕಿನ ಗೌಸ್ ಅವರು, ಕಾಪುವಿನ ಸಮೀರ್ ಅವರನ್ನು ಸಂಪರ್ಕಿಸಿದ್ದರು. ಕೆಲವು ದಿನಗಳ ನಂತರ ಗೌಸ್ ಇತರ ಇಬ್ಬರೊಂದಿಗೆ 2017 ಮಾಡೆಲ್ ಬಸ್ ಅನ್ನು ಪರಿಶೀಲಿಸಲು ಕಾಪುವಿಗೆ ಹೋಗಿದ್ದರು. ಮತ್ತು ಅದನ್ನು 9.50 ಲಕ್ಷಕ್ಕೆ ಖರೀದಿಸಲು ಒಪ್ಪಿಕೊಂಡರು. ಅಲ್ಲದೆ ಮುಂಗಡವಾಗಿ 2 ಲಕ್ಷ ರೂ. ಬಳಿಕ ಫೋನ್ ಪೇ ಮತ್ತು ನಗದು ಮೂಲಕ ಉಳಿದ ಮೊತ್ತವನ್ನು ನೀಡಿದ್ದರು. ಇದಾದ ನಂತರ ಸಮೀರ್ ಮತ್ತು ಆತನ ತಂದೆ ತುಮಕೂರಿನಲ್ಲಿ ನಿಲ್ಲಿಸಿದ್ದ ಬಸ್‌ನ್ನು ಕದ್ದು ತಂದಿದ್ದಾಗಿ ಆರೋಪಿಸಿ ಗೌಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ