ತಾಯಿಯೊಬ್ಬಳು ಮಗುವಿಗೆ ಸುಟ್ಟು ಗಾಯ ಮಾಡಿದ್ದ ಪ್ರಕರಣ; ಶಿಕ್ಷೆ ಪ್ರಕಟ

ಸುಳ್ಯ : ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ನ್ಯಾಯಾಲಯ ಆರೋಪಿಗೆ ಶಿಕ್ಷೆ ಘೋಷಿಸಿದೆ.

ಕಾವ್ಯಶ್ರೀ ಎಂಬವರು 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಸಿ ಹಾಲಿನ ಪಾತ್ರೆಯಿಂದ ತನ್ನ 5 ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸುಟ್ಟು ನೋವುಂಟು ಮಾಡಿದ್ದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಸುಳ್ಯ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು.

ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಹಿರಿಯ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಮೋಹನ್‌ ಬಾಬು ಅವರು ಆಪಾದಿತೆಯನ್ನು ದೋಷಿಯೆಂದು ಘೋಷಿಸಿದ್ದಾರೆ. ಅಪಾದಿತೆಗೆ ಒಟ್ಟು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಕಾರಗೃಹ ವಾಸದ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Related posts

ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

ಸಾಲಬಾಧೆಯಿಂದ ಮನನೊಂದು ಯುವಕ ಆತ್ಮಹತ್ಯೆ

ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ – ಸುನಿಲ್ ಕುಮಾರ್ ವ್ಯಂಗ್ಯ