ಉಡುಪಿ ನಗರದ ಹರ್ಷ ಶೋರೂಂನಲ್ಲಿ ನಡೆದ ಚೂರಿಯಿಂದ ಹಲ್ಲೆ ಪ್ರಕರಣ ಸಿಸಿಟಿವಿಯಲ್ಲಿ ಸೆರೆ

ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರೋನ್ಸನ್ ಎವರೆಸ್ಟ್ (36) ಮೇಲೆ ಶೋರೂಂನ ಸೆಕ್ಯೂರಿಟಿ ಗಾರ್ಡ್ ಪ್ರಸಾದ್ ಕೊಲೆಗೆ ಯತ್ನ ನಡೆಸಿದ್ದರು.

ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿದ್ದ ರೋನ್ಸನ್, ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್‌ಗೆ ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ವಾರ್ನಿಂಗ್ ನೀಡಿದ್ದರು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಕೇಳಿಕೊಂಡಿದ್ದ ಪ್ರಸಾದ್‌ಗೆ
ಮರುದಿನ ಮೀಟಿಂಗ್‌ನಲ್ಲಿ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು. ಮಾತುಕತೆ ಬಳಿಕ ಗ್ರೌಂಡ್ ಫ್ಲೋರ್‌ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದಾನೆ. ಪ್ರಾಣಾಪಯ ಅರಿತು ರೋನ್ಸನ್ ಓಡಿದಾಗ, ಅಟ್ಟಾಡಿಸಿಕೊಂಡು ಹೋಗಿ ಆರೋಪಿಯಿಂದ ಕೊಲೆಗೆ ಯತ್ನ ನಡೆದಿದೆ.

ಆಗಸ್ಟ್ 10 ರ ಸಂಜೆ 7.30 ವೇಳೆಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !