ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ; ವಿ.ಹಿ.ಪ.ಬಜರಂಗದಳ ವಿಟ್ಲ ಪ್ರಖಂಡ ಎಚ್ಚರಿಕೆ..!

ವಿಟ್ಲ : ಅಂಗಡಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕುದ್ದುಪದವಿನಲ್ಲಿ ನಿನ್ನೆ ನಡೆದಿದೆ.

ವಿಟ್ಲ ಕುದ್ದುಪದವು ಸಮೀಪದಲ್ಲಿರುವ ಅಂಗಡಿಯೊಂದಕ್ಕೆ ಬಾಲಕಿ ತೆರಳಿದ್ದ ವೇಳೆ ಅಂಗಡಿಯ ಮಾಲಕ ಅಶ್ರಫ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಅಶ್ರಫ್ ‌(40)ನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಯ ಬಂಧನ ಈವರೆಗೆ ನಡೆದಿಲ್ಲ, ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆರೋಪಿಯ ಬಂಧನವಾಗದಿದ್ದಲ್ಲಿ ಉಗ್ರ ಪ್ರತಿಭಟನೆಯ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವಿಟ್ಲ ಪ್ರಖಂಡದ ಮುಖಂಡರಾದ ಪದ್ಮನಾಭ ಕಟ್ಟೆ, ಅಜಿತ್ ಶಂಕರ್ ಮತ್ತು ಚೇತನ್ ಕಡಂಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ