ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕಾರ್ಕಳ ವ್ಯಕ್ತಿಗೆ 8 ಲಕ್ಷ ರೂ.‌ವಂಚನೆ

ಕಾರ್ಕಳ : ಕಸಬಾ ಗ್ರಾಮದ ಶಿವಾನಂದ ವಿ. ಪದ್ಮಶಾಲಿ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ಕಳ್ಳರು ಲಕ್ಷಾಂತರ ರೂ. ವಂಚಿಸಿದ ಘಟನೆ ವರದಿಯಾಗಿದೆ.

ಅಪರಿಚಿತ ವ್ಯಕ್ತಿಯು ಮುಂಬಯಿ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ ಎಂದು ಬೆದರಿಸಿದ್ದಾನೆ. 30 ಲಕ್ಷ ರೂ. ಹಣವನ್ನು ನೀವು ಬೇರೆ ಬೇರೆ ಅಕೌಂಟ್‌ನಲ್ಲಿ ಮೋಸ ಮಾಡಿದ್ದೀರಿ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ನಿಮ್ಮ ಅಕೌಂಟ್ ವೆರಿಫೈ ಆಗಬೇಕು. ಕೂಡಲೇ ಹಣ ವರ್ಗವಾಣೆ ಮಾಡಬೇಕು ಎಂದು ಹೆದರಿಸಿದ್ದಾನೆ.
ಇದರಿಂದ ಭಯಭೀತರಾದ ಶಿವಾನಂದ ಅವರು ಡಿಸೆಂಬರ್ 13 ರಿಂದ 17ರವೆರೆಗೆ ವಿವಿಧ ಹಂತಗಳಲ್ಲಿ ಪವನ್ ಕುಮಾರ್ ಗುಜ್ಜರ್ ಖಾತೆಗೆ ಒಟ್ಟು 8.93 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಕಾರ್ಕಳ ನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ