ಬ್ಯಾಂಕ್‌ ಹೆಸರಿನಲ್ಲಿ ಕರೆಮಾಡಿ ವ್ಯಕ್ತಿಗೆ 76,000 ರೂ. ವಂಚನೆ

ಕಾರ್ಕಳ : ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿ ವ್ಯಕ್ತಿಯೋರ್ವರಿಗೆ 76,000 ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಸಬಾ ಗ್ರಾಮದ ಬಾಲಚಂದ್ರ ಎಂಬವರು ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕಿನಲ್ಲಿ ಕ್ರೆಡಿಟ್‌ ಕಾರ್ಡ್‌ನ್ನು ಹೊಂದಿದ್ದು, ಸೆ. 30ರಂದು ಅವರಿಗೆ ಮನುಜ್‌ ಶರ್ಮಾ ಎಂಬವರು ಕರೆ ಮಾಡಿ HDFC ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿರುವುದಾಗಿ ತಿಳಿಸಿರುತ್ತಾರೆ.

ಮನುಜ್‌ ಶರ್ಮಾ ಬಾಲಚಂದ್ರ ಅವರಿಂದ ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕಿನ ವಿವರಗಳನ್ನು ಪಡೆದು ನಂತರ ಒಟಿಪಿಯನ್ನು ಪಡೆದಿರುತ್ತಾರೆ.

ಅ.1ರಂದು ಸಂಜೆ 4 ಗಂಟೆಯಿಂದ 6.30ರ ಮಧ್ಯಾವಧಿಯಲ್ಲಿ ಬಾಲಚಂದ್ರ ಅವರ ಖಾತೆಯಿಂದ ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಮೂಲಕ 76,188 ರೂ. ಕಡಿತವಾಗಿರುತ್ತದೆ.

ಈ ಕುರಿತು ಬಾಲಚಂದ್ರ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ