ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ ಹಲವರಿಗೆ 75 ಲಕ್ಷ ರೂ.ಗಳ ವಂಚನೆ

ಬ್ರಹ್ಮಾವರ : ಫೈನಾನ್ಸಿನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಒಟ್ಟು 75 ಲಕ್ಷ ರೂ.ಗಳನ್ನು ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಸುವಾಸಿನಿ ಹಾಗೂ ಅವರ ಸಹೋದರ ವಾದಿರಾಜ ಎಂಬವರು ನಡೂರಿನ ನಿತ್ಯಾನಂದ ಎಂಬವರಿಗೆ 35 ಲಕ್ಷ ರೂ. ಸೇರಿದಂತೆ ಹಲವರಿಗೆ ಒಟ್ಟು 75 ಲಕ್ಷ ರೂ.ವಂಚಿಸಿದ್ದಾರೆ. ಮಣಿಪಾಲದ ಹಣಕಾಸು ಸಂಸ್ಥೆಯೊಂದರಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಇವರು ನಿತ್ಯಾನಂದ (64) ಹಾಗೂ ಇತರರನ್ನು ನಂಬಿಸಿ 2023ರ ಡಿ.11ರಿಂದ 2024ರ ಜು.16ರವರೆಗೆ ಈ ಹಣವನ್ನು ಪಡೆದಿದ್ದರು ಎನ್ನಲಾಗಿದೆ.

ಆದರೆ ಇದುವರೆಗೂ ಅವರು ಹೇಳಿದ ಚಿನ್ನವನ್ನು ನೀಡದೇ, ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಮತ್ತು ಹಣವನ್ನು ವಾಪಾಸು ಕೇಳಿದ್ದಕ್ಕೆ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ