ದಕ್ಷಿಣ ಕನ್ನಡದಲ್ಲಿ 4 ಲಕ್ಷ ಸದಸ್ಯತ್ವದ ಗುರಿ : ಬಿಜೆಪಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಳೆದ ಬಾರಿ 2.5 ಲಕ್ಷ ಸದಸ್ಯರ ನೋಂದಣಿ ಮಾಡಿದ್ದು, ಈ ವರ್ಷ 4 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ರಾಷ್ಟ್ರಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಂಡಲಗಳಲ್ಲಿ ಶಾಸಕರು ಚಾಲನೆ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಪಕ್ಷಕ್ಕೆ ಸೇರ್ಪಡೆಯಾಗುವವರು ಟೋಲ್ ಫ್ರೀ 8800002024 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ, ಲಿಂಕ್ ಬರುತ್ತದೆ. ಅದರ ಮೂಲಕ ಹೆಸರು, ವಿವರ ಕೊಟ್ಟು ಸದಸ್ಯ ರಾಗಬಹುದು. ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನ ಅಂಗವಾಗಿ ಸೆ.11ರಿಂದ 17ರ ತನಕ ಮಹಾ ಅಭಿಯಾನ ನಡೆಯಲಿದೆ. ಪ್ರತಿ ಬೂತ್‌ನಲ್ಲಿ 250 ಸದಸ್ಯರ ನೋಂದಣಿ ಗುರಿ ಇದೆ. ಈಗಾಗಲೇ ಸದಸ್ಯರಾದವರು, 18 ವರ್ಷ ಮೇಲ್ಪಟ್ಟವರು ಬಿಜೆಪಿ ಕಚೇರಿಯಲ್ಲೂ ನೋಂದಣಿ ಮಾಡಿಸಬಹುದು ಎಂದರು.

Related posts

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ : ಸಚಿವ ದಿನೇಶ್ ಗುಂಡೂರಾವ್