ವಾರ್ಡ್-15 ಕುಂಜತ್ ಬೈಲ್ ದಕ್ಷಿಣದಲ್ಲಿ 39 ಲಕ್ಷ ಮೊತ್ತದ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

ಮಂಗಳೂರು : ವಾರ್ಡ್-15 ಕುಂಜತ್‌ಬೈಲ್ ದಕ್ಷಿಣದಲ್ಲಿ 39ಲಕ್ಷ ಮೊತ್ತದ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ನೆರವೇರಿಸಿದರು.

ವಾರ್ಡ್ ವ್ಯಾಪ್ತಿಯ ಗಾಂಧಿನಗರ ಅಡ್ಡರಸ್ತೆ 15 ಲಕ್ಷ, ಗಾಂಧಿನಗರ – ಪಳನೀರು ರಸ್ತೆ – ಕಾಲೇಜು ಅಭಿವೃದ್ಧಿ ರಸ್ತೆ, ಗಾಂಧಿನಗರ ಪ್ರಮೋದ್ ಮನೆ ಬಳಿ ಇಂಟರ್‌ಲಾಕ್ ವ್ಯವಸ್ಥೆ ಮತ ಪಳನೀರು ನಾರಾಯಣ ಗುರು ಮಂದಿರ ಬಳಿಯ ರಸ್ತೆ ಅಭಿವೃದ್ಧಿ 9 ಲಕ್ಷ ಮೊತ್ತದ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಜೊತೆಗೂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಸುಮಂಗಳ ರಾವ್, ಮಂಡಲ ಕಾರ್ಯದರ್ಶಿ ರಣ್‌ದೀಪ್ ಕಾಂಚನ್, ಕಾವೂರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಶೀತೇಶ್ ಕೊಂಡೆ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಕ್ಷಾತ್ ಶೆಟ್ಟಿ, ಕಾವೂರು ವಾರ್ಡ್ ಅಧ್ಯಕ್ಷರಾದ ಅಜಿತ್ ಕಾವೂರು, ಕಾರ್ಯದರ್ಶಿ ಉದಯಚಂದ್ರ ನವೀನ್ ಶಾಂತಿನಗರ, ಪ್ರಕಾಶ್, ಸದಾಶಿವ ಪೂಜಾರಿ, ದೀಕ್ಷಿತ್‌ರವರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ